ಬದುಕಿನ ಕಡಲು

ಓ ಕಡಲೇ, ಎಲ್ಲಿಂದ ತರುತಿರುವೆ
ಈ ಏರುತಿರುವ ಅಲೆಗಳನ್ನು?
ದೃಷ್ಠಿ ಹರಿಯುವ ತನಕ ಸಮನಾಗಿದ್ದು
ಹತ್ತಿರ ಬಂದಾಗ ಏರುತಿರುವೆ ಏಕೆ?

ಕಾಣದ ಅಂಚಿನಿಂದ ಬರುತಿಹುದು
ನೋವು ನಲಿವಿನ ಅಲೆಗಳು;
ಪ್ರೀತಿ ಧ್ವೇಷದ ಅಲೆಗಳು;
ಬದುಕು ಸಾವಿನ ಅಲೆಗಳು;
ಹಂಚುತಿರುವೆ ಸಮನಾಗಿ
ಯಾರಿಗೂ ಭೇದ ಭಾವ ತೋರದೆ.

ಮೋಡಗಳ ತುದಿಗೆ ಕಿರಣಗಳು ತಾಗಿ
ಹೊಳೆಯುತಿಹುದು ಹೊನ್ನಿನ ಬೆಳಕು,
ಮನಸ್ಸಿನ ಕತ್ತಲೆಯ ರಾಢಿಗೊಳಿಸಿ
ಒಳಗೆ ಮೂಡಿಸಿತು ಬಣ್ಣದ ಕನಸು.

ಹೊಸ ದಿನಕ್ಕೆ ತಯಾರಾಗುವ ಸೂರ್ಯ
ಕಡಲ ಚುಂಬಿಸಿ ಹೊರಟಿಹನು,
ನಮ್ಮಯ ನಾಳೆಯ ಬದುಕಿಗೆ
ಹೊಸ ಚೇತನವ ಮೂಡಿಸಿ ಹೊರಟಿಹನು.

ಅಲೆಯ ಏರುಪೇರುಗಳರಿತು
ಬಾಳುವುದೇ ನನ್ನಿ ಜೀವನ.
ಎಲ್ಲವೂ ಸಮನಾಗಿ ಸ್ವೀಕರಿಸಿ
ಮುಂದೆ ಸಾಗುವುದೇ ಮನುಜ ಮತ;
ಇದೇ ವಿಶ್ವ ಪಥ!

ಓ ಕಡಲೇ, ಎಲ್ಲಿಂದಲಾದರೂ
ಹೇಗಾದರೂ ತರುತಿರು ಅಲೆಗಳ,
ಕಾಣದ ಅಂಚಿಗೆ ತುಡಿಯುವ ಮನಸ್ಸಿಗೆ
ನಿನ್ನ ಈ ಅಲೆಗಳೇ ಸ್ಪೂರ್ತಿ.

ಹೊಸ ವಿಕಿರಣ!

I propose this evening to speak to you on a new kind of radiation or light-emission from atoms and molecules…

ಅಲ್ಲಿಯೇ ಟೇಬಲ್ ಮೇಲೆ ಇದ್ದ ಒಂದು ಬಾಟಲ್ ತೋರಿಸಿ, ಈ ಬಾಟಲ್ ನಲ್ಲಿ ನೀರಿದೆ ಮತ್ತು ತುಂಬ ಕಡಿಮೆ ಪ್ರಮಾಣದ ಪ್ಲೋರೋಸಿನ್ ಅನ್ನು ಕರಗಿಸಲಾಗಿದೆ.  ಈಗ ಈ ಬಾಟಲ್ ಅನ್ನು ಕಂದೀಲಿನ (ಲಾಟೀನು/ ಲಾಂದ್ರ) ಬೆಳಕಿನ ರೇಖೆಯಲ್ಲಿಟ್ಟರೆ, ಈ ಬಾಟಲಿನ ನೀರು ಹಸಿರು ಬಣ್ಣದಲ್ಲಿ ಹೊಳೆಯುತ್ತದೆ.  ಅಲ್ಲದೆ, ಬಾಟಲ್ ಮತ್ತು ಕಂದೀಲಿನ ನಡುವೆ ಈ ರೀತಿ ವಿವಿಧ ರೀತಿಯ ಬಣ್ಣದ ಶೋಧಕಗಳನ್ನು ಇರಿಸಿದರೂ ಸಹ ಬಾಟಲ್‌ನ ನೀರು ಹಸಿರು ಬಣ್ಣದಲ್ಲಿಯೇ ಇರುತ್ತದೆ…

ಈಗೆ ವಿವಿಧ ರೀತಿಯ ದ್ವಿತೀಯ ವಿಕಿರಣಗಳ (Secondary Radiation) ಅಸ್ತಿತ್ವದ ಬಗ್ಗೆ ಹಲವು ಪ್ರಯೋಗಗಳನ್ನು ಮಾಡುತ್ತಾ ಉಪನ್ಯಾಸವನ್ನು ನೀಡ ತೊಡಗಿದರು.  

ಇದು 1928 ಮಾರ್ಚ್ 16ರಂದು ಬೆಂಗಳೂರಿನಲ್ಲಿ ನಡೆದ ಸೌಥ್ ಇಂಡಿಯನ್ ಸೈನ್ಸ್ ಅಸೊಸಿಯೇಷನ್ ಸಮ್ಮೇಳನದ ಉದ್ಘಾಟನಾ ಉಪನ್ಯಾಸದ ತುಣುಕು.  ಅಂದಿಗೆ ಸೆಂಟ್ರಲ್ ಕಾಲೇಜಾಗಿದ್ದ ಈಗಿನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದಲ್ಲಿನ ರಾಮನ್ ಹಾಲ್ ಎಂದೇ ಕರೆಸಿಕೊಳ್ಳುವ ಕೊಠಡಿಯಲ್ಲಿ ಅಂದು ಸರ್ ಸಿ. ವಿ. ರಾಮನ್ ಈ ಉಪನ್ಯಾಸ ನೀಡಿದ್ದರು. 1928ರ ಫೆಬ್ರವರಿ 28 ರಂದು ಕಲ್ಕತ್ತಾದ ಇಂಡಿಯನ್ ಅಸೊಸಿಯೇಷನ್ ಫರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ ಕೇಂದ್ರದಲ್ಲಿ ಕೈಗೊಂಡಿದ್ದ ಪ್ರಯೋಗದಲ್ಲಿ ಪಲಿತಾಂಶ ಕಂಡುಕೊಂಡಿದ್ದ ರಾಮನ್ ಮೊದಲನೇ ಬಾರಿಗೆ ತಾವೇ ಉಪನ್ಯಾಸ ನೀಡಿ, ಪ್ರಯೋಗದ ರೂಪುರೇಷು ಮತ್ತದರ ಪಲಿತಾಂಶವನ್ನು ಜಗತ್ತಿಗೆ ಪರಿಚಯಿಸಿದ್ದು ಬೆಂಗಳೂರಲ್ಲೇ… ಇದೇ ರಾಮನ್ ಹಾಲ್‌ನಲ್ಲಿಯೇ (ಪ್ರಯೋಗದ ಪ್ರಕಟಣೆಗಳನ್ನು ಹೊರತುಪಡಿಸಿ).

ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದ ಇಂದಿನ  ಸಿ. ವಿ. ರಾಮನ್ ಹಾಲ್ | ಕೃಪೆ: ಬೆಂಗಳೂರು ಮಿರರ್

ಸರ್ ಸಿ. ವಿ. ರಾಮನ್ ತಿರುಚುನಾಪಲ್ಲಿಯ ತಿರುವನೈಕ್ಕಾವಲ್‌ನಲ್ಲಿ 1888ರ ನವೆಂಬರ್ ೦7 ರಂದು ಜನಿಸಿದರು. ತಾಯಿ ಪಾರ್ವತಿ ಅಮ್ಮಾಲ್, ತಂದೆ ಚಂದ್ರಶೇಖರ್ ಐಯ್ಯರ್. ಇವರಿಗೆ ಐದು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ರಾಮನ್ ಎರಡನೇಯವರು.  ರಾಮನ್ ರವರ ತಂದೆ ಶಾಲಾ ಶಿಕ್ಷಕರಾಗಿದ್ದು ಭೌತ ವಿಜ್ಞಾನ, ಗಣಿತ ಮತ್ತು ತತ್ವ ವಿಜ್ಞಾನ ಹಾಗೂ ಸಂಗೀತದಲ್ಲಿ ಬಹಳಾ ಆಸಕ್ತಿ ಹೊಂದಿದ್ದರು. 1892 ರಲ್ಲಿ ಇವರಿಗೆ ವಿಶಾಕಾಪಟ್ಟಣಕ್ಕೆ ವರ್ಗಾವಣೆ ಆದ ಕಾರಣ, ರಾಮನ್‌ರವರ ಪ್ರಾಥಮಿಕ ವಿದ್ಯಾಭ್ಯಾಸ ವಿಶಾಕಾಪಟ್ಟಣದಲ್ಲಿಯೇ ನಡೆಯಿತು. ರಾಮನ್ ತಮ್ಮ 11 ನೇ ವಯ್ಯಸ್ಸಿನಲ್ಲಿಯೇ ಮೆಟ್ರಿಕುಲೇಷನ್ ಪಾಸ್ ಮಾಡಿ ಈಗಿನ ಪಿ.ಯು.ಸಿ. ಪರೀಕ್ಷೆಗೆ ಸಮನಾಗಿದ್ದ ಎಫ್.ಎ. ಪರೀಕ್ಷೆಯಲ್ಲಿ ಅಂದಿನ ಆಂದ್ರ ಪ್ರದೇಶದ ರಾಜ್ಯಕ್ಕೆ ಪ್ರಥಮರಾಗಿ ತೇರ್ಗಡೆ ಹೊಂದಿದ್ದರು.

ತದನಂತರ ರಾಮನ್‌ರ ಕುಟುಂಬ ಮದ್ರಾಸ್‌ಗೆ (ಈಗಿನ ಚನೈ) ವರ್ಗಾವಣೆಗೊಂಡಾಗ, ರಾಮನ್ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನ & ಇಂಗ್ಲೀಷ್‌ನಲ್ಲಿ ಬಿ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು.  ಅಷ್ಠೊತ್ತಿಗೆ ರಾಮನ್ ವಿಜ್ಞಾನದ ಹಲವು ವಿಷಯಗಳ ಬಗ್ಗೆ ಚಿಂತಿಸಿ ವಿಚಾರ ಮಾಡುತ್ತಿದ್ದರು. ಅಲ್ಲದೆ, 1906 ರಲ್ಲಿಯೇ ತಮ್ಮ ಮೊದಲನೇ ವಿಜ್ಞಾನ ಲೇಖನವನ್ನು ಬ್ರೀಟೀಷ್ ಜರ್ನಲ್ ಆದ ಫಿಲಾಸೋಫಿಕಲ್ ಮ್ಯಾಗಝಿನ್ ನಲ್ಲಿ ಪ್ರಕಟಿಸಿದರು.  ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿಯನ್ನೂ ಪಡೆದು, ತಮ್ಮ ಎರಡನೇ ವಿಜ್ಞಾನ ಸಂಶೋಧನಾ ಲೇಖನವನ್ನು ದ್ರವಗಳ ಮೇಲ್ಮೆ ಎಳೆತದ (Surface Tension) ವಿಷಯದ ಮೇಲೆ ಪ್ರಕಟಿಸಿದರು. ಇದಾದನಂತರ, ರಾಮನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಪಾಸ್ ಮಾಡಿ ಹಣಾಕಾಸು ಇಲಾಖೆಯಲ್ಲಿ ಕೆಲಸವನ್ನು ಪಡೆದರು. ಇದರ ಮಧ್ಯೆ, ರಾಮನ್ ತಮ್ಮ 13 ನೇ ವಯ್ಯಸ್ಸಿನಲ್ಲಿಯೇ ವೀಣೆಯಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ನುಡಿಸುತ್ತಿದ್ದ ‘ಲೋಕಸುಂದರಿ’ ಎಂಬ ಹುಡುಗಿಗೆ ಮನಸ್ಸೊಪ್ಪಿಸಿ, ಮದುವೆಯಾಗಿದ್ದರು.

ಸಿವಿಲ್ ಸರ್ವಿಸ್ ಪರೀಕ್ಷೆಯಿಂದ ಕೆಲಸ ಪಡೆದಿದ್ದ ರಾಮನ್, 1907 ರಲ್ಲಿ ಕಲ್ಕಾತ್ತಾಗೆ ತೆರಳಿ ಹಣಕಾಸು ಇಲಾಖೆಯಲ್ಲಿ ಸಹಾಯಕ ಮಹಾಲೇಖಪಾಲರಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು.  ಪ್ರತಿ ದಿನ ಕಛೇರಿಗೆ ತೆರಳಬೇಕಾಗದರೆ, ಕಾಣಸಿಗುತ್ತಿದ್ದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್ (Indian Association for the Cultivation of Science- IACS) ಸಂಸ್ಥೆಯನ್ನು ಕಂಡು, ತಾವು ಅಧ್ಯಯನ ಮಾಡಬೇಕು ಎಂದು ಕೊಂಡಿದ್ದ ವಿಜ್ಞಾನ ವಿಷಯಗಳ ಮೇಲೆ ಆ ಸಂಸ್ಥೆಯಲ್ಲಿನ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡಬೇಕು ಎಂದು ಯೋಚಿಸಿದ್ದರು. ಕೊನೆಗೂ ಅನುಮತಿಯನ್ನು ಪಡೆದು ಕಛೇರಿಯ ಸಮಯವಲ್ಲದೆ, ಇತರ ಸಮಯಗಳಲ್ಲಿ ತಮ್ಮ ಪ್ರಯೋಗಗಳನ್ನು IACS ಸಂಸ್ಥೆಯಲ್ಲಿ ಕೈಗೊಂಡರು. ಅಲ್ಲದೆ ಕಲ್ಕಾತ್ತಾ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ, ತಮ್ಮ ಹಣಕಾಸು ಇಲಾಖೆಯ ಸಹಾಯಕ ಮಹಾಲೇಖಪಾಲರ ವೃತ್ತಿಯನ್ನು ಬಿಟ್ಟು, ಹೆಸರಾಂತ ಪಲಿಟ್ ಪ್ರೊಫೆಸರ್ ಆಫ್ ಪಿಸಿಕ್ಸ್ರಾಗಿ ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಸೇರಿದರು.

ರಾಮನ್ ಭೌತ ವಿಜ್ಞಾನ ಪ್ರೊಫೆಸರ್ ಆಗಿ ಹಾಗು IACS ಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆಗಿ ತಮ್ಮ ಅಧೀನದಲ್ಲಿದ್ದ ಎರಡು ಪ್ರಯೋಗಾಲಯಗಳನ್ನು ನಿರ್ವಹಿಸಿತ್ತಾ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದರು. ರಾಮನ್ ತಮ್ಮ ಕಾರ್ಯದರ್ಶಿಯ ಅವಧಿಯಲ್ಲಿಯೇ IACS ಸಂಸ್ಥೆಯಲ್ಲಿ ನಿರ್ವಹಿಸಿದ ಪ್ರಯೋಗಗಳ ಪಲಿತಾಂಶಗಳನ್ನು ವಿಜ್ಞಾನ ಪ್ರಪಂಚಕ್ಕೆ ತಿಳಿಸಲು ಪ್ರೊಸಿಡಿಂಗ್ಸ್ ಆಫ್ IACS ಎಂಬ ಜರ್ನಲ್ ಅನ್ನು ಪ್ರಾರಂಭಿಸಿದರು. ಇದೇ ಜರ್ನಲ್ ಮುಂದೆ ‘ಜರ್ನಲ್ ಆಫ್ ಫಿಸಿಕ್ಸ್’ ಎಂದೇ ಪ್ರಖ್ಯಾತವಾಗಿ ಇಂದಿಗೂ ಚಾಲ್ತಿಯಲ್ಲಿದೆ. 1930 ರಲ್ಲಿ ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ಬರಲು ‘ಜರ್ನಲ್ ಆಫ್ ಪಿಸಿಕ್ಸ್’ ಬಹಳ ಪ್ರಮುಖವಾದ್ದು.  ಬಹುಷಃ ಈ ಜರ್ನಲ್ ಅಲ್ಲಿ ರಾಮನ್ ತಮ್ಮ ಪ್ರಯೋಗದ ಪಲಿತಾಂಶವನ್ನು ಪ್ರಕಟಿಸದಿದ್ದರೆ ನೊಬೆಲ್ ಪ್ರಶಸ್ತಿ ಬರುತ್ತಿರಲಿಲ್ಲಾ ಎಂದೇ ಹೇಳಬಹುದೇನೋ?

ಚಿತ್ರ ಕೃಪೆ: ಅಂತರ್ಜಾಲ

20 ನೇ ಶತಮಾನದ ಪ್ರಾರಂಭದ ಮೂರು ದಶಕಗಳು ವಿಜ್ಞಾನ ಇತಿಹಾಸದಲ್ಲಿಯೇ, ಅದರಲ್ಲೂ ಪ್ರಮುಖವಾಗಿ ಭೌತ ವಿಜ್ಞಾನದಲ್ಲಿ ಹಲವು ಬದಲಾವಣೆಗಳಾದ ಹಾಗೂ ವಿಜ್ಞಾನದ ಸಿದ್ದ ಮಾದರಿಗಳನ್ನು ಒಡೆದುಹಾಕಿದ ದಶಕಗಳಾಗಿದ್ದವು.  ರಾಮನ್‌ರ ಸಮಕಾಲಿನರಾದ ಲಾರ್ಡ್ ರೇಲಿನ್, ನೀಲ್ಸ್ ಬೋರ್, ರುಧರ್ ಪೋರ್ಡ್, ಐನ್‌ಸ್ಟೆನ್, ಇರ್ವಿನ್ ಶ್ರೋಡಿಂಜರ್, ಮ್ಯಾಕ್ಸ್ ಬಾರ್ನ್ ನಂತಹ ಹಲವು ದಿಗ್ಗಜ ವಿಜ್ಞಾನಿಗಳು ಹೊಸ ಹೊಸ ವಿಚಾರಗಳನ್ನು ಮಂಡಿಸುತ್ತಾ ಅದನ್ನು ಪ್ರಯೋಗಕ್ಕೆ ಒಳಪಡುತ್ತಿದ್ದ ಕಾಲ. ‘ಬೆಳಕ’ನ್ನು ‘ಕಣ ಸ್ವಭಾವ’ದಿಂದ (particle nature) ಅರ್ಥ ಮಾಡಿಕೊಳ್ಳುವುದೋ ಅಥವಾ ‘ತರಂಗ ಸ್ವಭಾವ’ದಿಂದ (wave nature)  ಅರ್ಥ ಮಾಡಿಕೊಳ್ಳುವುದೋ ಎಂದು ಚರ್ಚಿಸುತ್ತಿದ್ದ, ಚಿಂತಿಸುತ್ತಿದ್ದ ಕಾಲವದು. ಅಣುಗಳ ಚಲನೆ, ಬೆಳಕಿನ ಸ್ವಭಾವ ವಿವರಿಸಲು ಹೊಸದೊಂದು ವಿಭಾಗವಾದ ಕ್ವಾಂಟಮ್ ಮೆಕಾನಿಕ್ಸ್, ವಿಷೇಶ ಮತ್ತು ಸಾಪೇಕ್ಷ ಸಿದ್ಧಾಂತಗಳು ಹುಟ್ಟುಕೊಳ್ಳುತ್ತಿದ್ದ ಕಾಲವೂ ಹೌದು.

ಈಗೆ ಅಣು, ಪರಮಾಣು ಮತ್ತು ಬೆಳಕಿನ ಹಲವು ಮಜಲುಗಳನ್ನು ಚರ್ಚಿಸುವ ಕಾಲದಲ್ಲೇ, ಅದಾಗಲೇ ಭೌತ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಲಾರ್ಡ್ ರೇಲಿನ್, ಸಮುದ್ರ ನೀಲಿ ಬಣ್ಣದಲ್ಲಿ ಕಾಣುವುದಕ್ಕೂ ಮತ್ತು ಅದರ ನೀರಿಗೂ ಯಾವುದೇ ಸಂಬಂಧವಿಲ್ಲ, ಸಮುದ್ರ ಆಕಾಶದ ಬಣ್ಣವನ್ನು ಪ್ರತಿಫಲನೆ ಮಾಡುವುದರಿಂದ ನೀಲಿ ಬಣ್ಣದಿಂದ ಕಾಣುತ್ತದೆ ಎಂದು ಪ್ರತಿಪಾದಿಸಿದ್ದರು. 1920 ರಲ್ಲಿ ರಾಮನ್ ರೇಲಿನ್‌ನ ಈ ಪ್ರತಿಪಾಧನೆಯನ್ನು ಅಲ್ಲಗೆಳೆದು, ಸಮುದ್ರದ ನೀಲಿ ಬಣ್ಣ ಮತ್ತು ನೀರಿಗಿರುವ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿ, ಬೆಳಕಿನ ಕಿರಣಗಳು ನೀರಿನ ಅಣುಗಳಿಂದ ವಿವರ್ತನೆಗೊಳ್ಳುವುದರಿಂದ (Diffraction of Light) ಸಮುದ್ರದ ನೀರು ನೀಲಿ ಬಣ್ಣದಲ್ಲಿ ಕಾಣುತ್ತದೆ ಎಂದು ವಿವರಿಸಿ, ಪ್ರಯೋಗ ಮಾಡಿ ತೊರಿಸಿದರು.  ಈಗೆ ಬೆಳಕಿನ ವಿವರ್ತನೆ, ಚದುರುವಿಕೆ (Scattering) ಮತ್ತು ಪ್ಲೋರೋಸೆನ್ಸ್ (Flurescence) ಬಗ್ಗೆ ಹಲವು ಪ್ರಯೋಗಗಳನ್ನು ರಾಮನ್ ನಡೆಸುತ್ತಿದ್ದರು. ಈ ಪ್ರಯೋಗಗಳಲ್ಲಿ ಬೆಳಕಿನ ಪ್ರಾಥಮಿಕ ವಿಕಿರಣಗಳು ಮತ್ತು ದ್ವಿತೀಯ ವಿಕಿರಣಗಳ ಮೇಲೆ ಹೆಚ್ಚು ಗಹನವಾಗಿ ಅಧ್ಯಯನ ಕೈಗೊಂಡಿದ್ದರು.  1921 ರ ದಶಕದಲ್ಲಿ ಈ ವಿಷಯಗಳ ಬಗ್ಗೆ ಪ್ರಪಂಚದಾದ್ಯಂತ ಅನೇಕ ಪ್ರಯೋಗಾಲಯಗಳಲ್ಲಿ ಇತರೆ ವಿಜ್ಞಾನಿಗಳೂ ಸಹ ಅಧ್ಯಯನ ನಡೆಸುತ್ತಿದ್ದರು.

ರಾಮನ್ 1922 ರಿಂದ ಸತತವಾಗಿ ಏಳು ವರ್ಷ ಈ ವಿಷಯಗಳ ಮೇಲೆ ಅನೇಕ ಸಂಶೋಧನೆಗಳನ್ನು IACS ಯಲ್ಲಿ ನಡೆಸಿದರು.  ಈ ಸಂಸ್ಥೆಯಲ್ಲಿ ರಾಮನ್‌ರ ಸಹೋದ್ಯೋಗಿ ಸಂಶೋಧಕರ ಪಟ್ಟಿ ಬಹಳ ದೊಡ್ಡದಿದೆ. ರಾಮಕೃಷ್ಣ ರಾವ್, ವೆಂಕಟೇಶ್ವರನ್, ರಾಮಚಂದ್ರರಾವ್, ರಾಮನಾಥನ್, ಶ್ರೀವಾತ್ಸವ, ಕಾಮೇಶ್ವರ್ ರಾವ್, ರಾಮದಾಸ್, ಸೊಗನಿ ಮತ್ತು ಕೆ. ಎಸ್. ಕೃಷ್ಣನ್ ಇವರುಗಳು 1922-27 ರಲ್ಲಿ ಕೈಗೊಂಡ ಬೆಳಕಿನ ಚದುರುವಿಕೆ ಮತ್ತು ಪ್ಲೋರೋಸೆನ್ಸ್ ವಿಷಯಗಳಲ್ಲಿನ ದ್ವಿತೀಯ ವಿಕಿರಣಗಳ ಬಗ್ಗೆ ಹಲವು ಅಧ್ಯಯನಗಳನ್ನು ಕೈಗೊಂಡಿದ್ದರು.  ನೊಬೆಲ್ ಪ್ರಶಸ್ತಿ ಪಡೆದ ದಿನ ತಮ್ಮ ನೋಬೆಲ್ ಉಪನ್ಯಾಸದಲ್ಲಿ ರಾಮನ್ ಇವರೆಲ್ಲರ ಹೆಸರುಗಳನ್ನು ಅವರು ನಡೆಸಿದ ಪ್ರಯೋಗಗಳನ್ನೆಲ್ಲವನ್ನು ವಿವರವಾಗಿ ಉಲ್ಲೇಖಿಸುತ್ತಾರೆ.   

ಸರ್. ಸಿ. ವಿ. ರಾಮನ್‌ಗೆ ನೊಬೆಲ್ ಪಾರಿತೋಷಕ ಒದಗಿಸಿದ ಪ್ರಯೋಗ ರಾಮನ್ ಮತ್ತು ರಾಮನ್ ಶಿಷ್ಯ ಕೆ. ಎಸ್. ಕೃಷ್ಣನ್ ಒಟ್ಟಾಗಿ ನಡೆಸಿದ ಬೆಳಕಿನ ಚದುರುವಿಕೆಗೆ ಸಂಬಂದಿಸಿದ ಅಧ್ಯಯನ. ಈ ಪ್ರಯೋಗದ ಸಂಕ್ಷಿಪ್ತ ವಿವರ ಇಲ್ಲಿದೆ: ಒಂದು ನಿರ್ದಿಷ್ಠ ತರಂಗಾಂತರದ (wavelength) ಬೆಳಕು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಮುಖಾಂತರ ಹಾದು ಚದುರುವಿಕೆಯಾಗಿ (Scattering) ಹೊರ ಬರುವಾಗ, ಆ ಬೆಳಕಿನ ತರಂಗಾಂತರ ಮೂಲ ಬೆಳಕಿನ ತರಂಗಾಂತರಕ್ಕಿಂತಲೂ ಬೇರೆಯಾಗಿರುತ್ತದೆ. ಈ ಬೇರೆಯಾಗಿರುವ ಬೆಳಕಿನ ಕಿರಣಗಳನ್ನು ದ್ವಿತೀಯ ವಿಕಿರಣ ಎಂದು ಕರೆಯಲಾಗುತ್ತೆ.  ಅಂದಿಗೆ ಅರ್ಥವಾಗಿದ್ದ ದ್ವಿತೀಯ ವಿಕರಣಗಳು ಉತ್ಪತ್ತಿಯಾಗುವ ಪ್ರಕ್ರಿಯೆಗಳಲ್ಲಿ ಯಾವ ಪ್ರಕ್ರಿಯೆಯೂ ರಾಮನ್‌ಗೆ ಕಂಡಿದ್ದ ದ್ವಿತೀಯ ವಿಕಿರಣವನ್ನು ವಿವರಿಸಲು ಸಾಧ್ಯವಾಗಲಿಲ್ಲಾ. ಇದಕ್ಕಾಗಿಯೇ ರಾಮನ್ ಈ ಪ್ರಯೋಗದ ಮೇಲೆ ಬರೆದ ಮೊದಲ ಲೇಖನ ಮತ್ತು ಉಪನ್ಯಾಸದ ಒಕ್ಕಣೆಯನ್ನು ‘ಒಂದು ಹೊಸ ವಿಕಿರಣ’ (A New Radiation) ಎಂದೇ ಕರೆದರು. ರಾಮನ್ ತಮ್ಮ ಪ್ರಯೋಗದಲ್ಲಿ ಉತ್ಪತ್ತಿಯಾಗಿದ್ದ ಹೊಸ ವಿಕಿರಣವನ್ನು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಒಳಗಡೆಯೇ ಸೃಷ್ಠಿಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟು, 80 ವಿವಿಧ ರಾಸಾಯನಿಕ ಸಂಯುಕ್ತಗಳಲ್ಲಿ ಇದರ ಅನ್ವೇಷಣೆ ನೆಡೆಸಿ ಸಾಬೀತುಪಡಿಸಿದರು. ಈ ಪ್ರಯೋಗ ನಡೆದದ್ದು ಫೆಬ್ರವರಿ 28, 1928! ನಂತರದ ದಿನದಲ್ಲಿಯೇ ಈ ಪ್ರಯೋಗದ ಬಗ್ಗೆ ಒಂದು ಲೇಖನವನ್ನು IACSನ ಜರ್ನಲ್ ಆಫ್ ಫಿಸಿಕ್ಸ್ನಲ್ಲಿ ರಾಮನ್ ಪ್ರಕಟಿಸುತ್ತಾರೆ. ಈ ಪ್ರಕಟಣೆಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲಾಗುತ್ತದೆ, ರಾಮನ್ ಕೂಡ ಇತರ ದೇಶದಲ್ಲಿನ ತನ್ನ ಸಹ ವಿಜ್ಞಾನಿಗಳಿಗೂ ಕಳುಹಿಸುತ್ತಾರೆ.

ಇದೇ ಸಮಯದಲ್ಲಿ ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್ಬರ್ಗ್ ಮತ್ತು ಮೆಂಡಲ್‌ಸ್ಟಾö್ಯಮ್ ಸಹ ಇಂತಹದೇ ಪ್ರಯೋಗ ನಡೆಸಿ, ಬೆಳಕಿನ ಚದುರುವಿಕೆಯಲ್ಲಿನ ಹೊಸ ದ್ವಿತೀಯ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿ ಯಶಸ್ಸು ಕಂಡಿರುತ್ತಾರೆ. ಈ ಪ್ರಯೋಗ ಅಂದಿನ ಕಾಲಕ್ಕೆ ಬಹಳ ಪ್ರಮುಖವಾದ ಪ್ರಯೋಗ ಮತ್ತು ವಿಜ್ಞಾನದ ಒಂದು ಮೈಲುಗಲ್ಲು. ಏಕೆಂದರೆ, ಈ ಪ್ರಯೋಗದಿಂದ ಬರುವ ಹೊಸ ವಿಕಿರಣದ ರೋಹಿತವನ್ನು (Spectrum) ಅಧ್ಯಯನ ಮಾಡಿದರೆ, ಪ್ರಯೋಗಕ್ಕೆ ಬಳಸಿದ ರಾಸಾಯನಿಕ ಸಂಯುಕ್ತದ ಅಣುಗಳ ರಚನೆಯನ್ನು ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ವಿವರಿಸಬಹುದಾಗಿದೆ. ಅಂದಿನವರೆಗೂ ಇಂತಹಾ ರಾಸಾಯನಿಕ ಸಂಯುಕ್ತವನ್ನು ಅಧ್ಯಯನ ನಡೆಸುವ ಮಾರ್ಗವೇ ಇರಲಿಲ್ಲಾ. ಹಾಗಾಗಿ, ಈ ಪ್ರಯೋಗವು ಭೌತ ವಿಜ್ಞಾನದಲ್ಲಿ ಕ್ರಾಂತಿಯೇ ಆಯಿತು. ಇಂದಿಗೂ ಕೂಡ ಈ ಪ್ರಯೋಗ, ಅಂದರೇ ರಾಮನ್ ಪರಿಣಾಮ ತುಂಬಾ ಪ್ರಮುಖವಾದದ್ದು. ಮಂಗಳನ ಗ್ರಹದ ಮೇಲೆ ಇಳಿದಿರುವ ಪರ್ಸಿವರೆನ್ಸ್ ರೋವರ್ ಕೂಡ ಮಂಗಳನ ಮಣ್ಣುಗಳನ್ನು ಪರೀಕ್ಷೆ ಮಾಡಲು ರಾಮನ್ ರೋಹಿತನ್ನೂ ಅವಲಂಬಿಸಿದೆ. ಈ ಕ್ರಾಂತಿಕಾರಿ ಪ್ರಯೋಗಕ್ಕೆ 1929 ಮತ್ತು 1930 ರಲ್ಲಿ ಹಲವು ವಿಜ್ಞಾನಿಗಳು ರಾಮನ್ ಮತ್ತು ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್ಬರ್ಗ್ ಮತ್ತು ಮೆಂಡಲ್‌ಸ್ಟಾö್ಯಮ್ ರವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದರು. ಅದರಲ್ಲೂ 1930 ರಲ್ಲಿ ಸುಮರು ಹತ್ತಕ್ಕೂ ಹೆಚ್ಚು ವಿಜ್ಞಾನಿಗಳು ರಾಮನ್ ಹೆಸರನ್ನು ನಾಮನಿರ್ದೇಶನ ಮಾಡಿದ್ದು, ಆ ವರ್ಷ ಸಿ. ವಿ. ರಾಮನ್ ಒಬ್ಬರಿಗೆ ಭೌತ ವಿಜ್ಞಾನ ವಿಷಯದ ನೊಬೆಲ್ ಪ್ರಶಸ್ತಿ ಬರುತ್ತದೆ.   

ಈ ಹೊಸ ವಿಕಿರಣದ ಅನ್ವೇಷಣೆಯನ್ನು ರಷ್ಯ ವಿಜ್ಞಾನಿಗಳಿಗಿಂತಲೂ ರಾಮನ್ ಭಾರತದ ಜರ್ನಲ್ ಆರ್ಫ ಫಿಸಿಕ್ಸ್ನಲ್ಲಿ ಮೊದಲು ಪ್ರಕಟಿಸಿರುತ್ತಾರೆ. ಇದಾದ ನಂತರ ರಾಮನ್ ನೇಚರ್ ಜರ್ನಲ್ ಅಲ್ಲಿ ಪ್ರಕಟಿಸಿರುತ್ತಾರೆ, ಅಷ್ಟೊತ್ತಿಗೆ ರಷ್ಯಾ ವಿಜ್ಞಾನಿಗಳೂ ಸಂಶೋಧನೆಯನ್ನು ಪ್ರಕಟಿಸಿರುತ್ತಾರೆ.  ನೊಬಲ್ ಸಮಿತಿಯು ತನ್ನ 1930 ರ ಭೌತ ವಿಜ್ಞಾನ ಪ್ರಶಸ್ತಿ ನೀಡುವ ವಿವರಗಳಲ್ಲಿ IACSಲ್ಲಿ ಪ್ರಕಟವಾದ ರಾಮನ್ ಲೇಖನವನ್ನು ಸಹ ಪಟ್ಟಿ ಮಾಡಿ, ಇದು ಈ ಪ್ರಯೋಗದ ಮೊದಲ ಪ್ರಕಟಣೆ ಎಂದೇ ಪರಿಗಣಸಿರುತ್ತದೆ. ಹೀಗೆ ರಾಮನ್ ತಾವೇ ಪ್ರಾರಂಭಿಸಿದ್ದ IACS ನ ಜರ್ನಲ್ ಆಫ್ ಫಿಸಿಕ್ಸ್ನ  ಅನ್ನು ಸಂಸ್ಥೆಯ ಪ್ರಯೋಗಗಳ ಪಲಿತಾಂಶಗಳನ್ನು ತಕ್ಷಣಕ್ಕೆ ಪ್ರಕಟಿಸಲು ಮತ್ತು ಎಲ್ಲರಿಗೂ ತಿಳಿಸಲು ಸೂಕ್ತವಾಗಿ ಬಳಸಿಕೊಂಡಿದ್ದರು. ಇಂದಿಗೂ ಜರ್ನಲ್ ಆಫ್ ಪಿಸಿಕ್ಸ್ ಭಾರತದ ಪ್ರಸಿದ್ದ ಭೌತ ವಿಜ್ಞಾನ ಜರ್ನಲ್ ಆಗಿದೆ.

ಈಗಿದ್ದರೂ, ಭಾರತಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಪ್ರಯೋಗವನ್ನು ರಾಮನ್ ಒಬ್ಬರೆ ಕೈಗೊಂಡಿರಲಿಲ್ಲಾ. ಈ ಅಧ್ಯಯನದಲ್ಲಿ ಅನೇಕ ಪ್ರಯೋಗಗಳನ್ನು ಸಿ. ವಿ. ರಾಮನ್ ಮತ್ತು ಕೆ. ಎಸ್. ಕೃಷ್ಣನ್ ಇಬ್ಬರೂ ನಡೆಸಿದ್ದರು.  ಈ ಪ್ರಯೋಗದಲ್ಲಿನ ಅನ್ವೇಷಣೆಯ ಬಗ್ಗೆ ಪ್ರಕಟವಾದ ಮೊದಲ ವೈಜ್ಞಾನಿಕ ಲೇಖನದಲ್ಲಿ ರಾಮನ್‌ರ ಜೊತೆ ಕೃಷ್ಣನ್ ಕೂಡ ಎರಡನೇ ಸಂಶೋಧಕ ಲೇಖಕರಾಗಿದ್ದರು. ತದನಂತರ ಪ್ರಕಟವಾದ ಎರಡನೇ ಪತ್ರಿಕೆಯಾದ A change of wavelength in light scattering ನಲ್ಲಿ ರಾಮನ್ ಒಬ್ಬರೇ ಲೇಖಕರಾಗಿರುತ್ತಾರೆ. ಇದಕ್ಕೆ ಕಾರಣ ಇಂದಿಗೂ ತಿಳಿದಿಲ್ಲಾ. ಆದರೂ, ರಾಮನ್ ತಮ್ಮ ಎಲ್ಲಾ ಉಪನ್ಯಾಸಗಳಲ್ಲೂ ಮತ್ತು ಲೇಖನಗಳಲ್ಲೂ ಕೆ. ಎಸ್. ಕೃಷ್ಣನ್ ರವರ ಕೊಡುಗೆಯನ್ನು ಸ್ಮರಿಸುತ್ತಲೇ ಇರುವುದನ್ನು ನಾವು ಈ ಪ್ರಯೋಗಕ್ಕೆ ಸಂಬಂದಿಸಿದ ಅವರ ಎಲ್ಲಾ ಸಂಶೋಧನಾ ಲೇಖನಗಳನ್ನು ಒದಿದರೆ ತಿಳಿಯುತ್ತದೆ. ಒಂದು ಸಂದರ್ಭದಲ್ಲಿ, ರಾಮನ್ ಈ ಸಂಶೋಧನೆಯನ್ನು ‘ರಾಮನ್-ಕೃಷ್ಣನ್ ಪರಿಣಾಮ’ ಎಂದೇ ಹೆಸರಿಸಬೇಕು ಎಂದಿದ್ದರಂತೆ. ಆದರೂ ಇಂದಿಗೂ ಈ ಪ್ರಯೋಗ ರಾಮನ್ ಪರಿಣಾಮ ಎಂದೇ ಪ್ರಸಿದ್ದಿಯಾಯಿಗಿದೆ. ರಾಮನ್ ಪರಿಣಾಮದ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣನ್ ಕೂಡ ತಮ್ಮ ಡೈರಿಯಲ್ಲಿ ಈ ಪ್ರಯೋಗದ ನಿರ್ಣಾಯಕ ಘಟ್ಟದಲ್ಲಿ ಹೊಸ ವಿಕಿರಣದ ಪಲಿತಾಂಶವನ್ನು ಸೂಕ್ತವಾಗಿ ವಿಷ್ಲೇಶಿಸಿದ್ದು ಪ್ರೊ. ರಾಮನ್ ರವರೇ, ನಮಗಾರಿಗೂ ಅಂತಹಾ ಯೋಚನೆ ಹೊಳೆದಿರಲೇ ಇಲ್ಲಾ ಎಂದು ಬರೆದುಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ರಾಮನ್, ಕೃಷ್ಣನ್‌ರವರನ್ನು ಫೆಲೋ ಆಫ್ ರಾಯಲ್ ಸೊಸೈಟಿ ಆಪ್ ಲಂಡನ್‌ಗೆ ನಾಮ ನಿರ್ದೇಶನ ಮಾಡುತ್ತಾರೆ.  ಆ ನಾಮನಿರ್ದೇಶನದ ಪತ್ರದಲ್ಲಿ ಕೆ. ಎಸ್. ಕೃಷ್ಣನ್ ಅನ್ನು ರಾಮನ್ ಪರಿಣಾಮದ ಸಹ ಅನ್ವೇಷಕ ಎಂದೇ ಬರೆಯುತ್ತಾರೆ! ಅಲ್ಲದೆ, ಭಾರತದ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಕೆ. ಎಸ್. ಕೃಷ್ಣನ್ (1958 ರಲ್ಲಿ).  

ಏನೇ ಇರಲಿ, ಈ ಪ್ರಯೋಗಕ್ಕೆ 1930 ರಲ್ಲಿ ಸರ್ ಸಿ. ವಿ. ರಾಮನ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇದು ಭಾರತದ ವಿಜ್ಞಾನ ಕ್ಷೇತ್ರಕ್ಕೆ ಸಂದ ಮೊದಲ ನೊಬೆಲ್ ಪಾರಿತೋಷಕ.  ಈ ಸಾಧನೇ, ರಾಮನ್ ಹೆಸರಿನ ವೈಯ್ಯಕ್ತಿಕ ವಿಜ್ಞಾನಿ ಹೆಸರಿನಲ್ಲಿದ್ದರೂ, ಈ ಪ್ರಶಸ್ತಿಯು ಅಂದು/ ಇಂದು ದೇಶದಲ್ಲಿ ನಡೆಯುತ್ತಿದ್ದ / ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳು, ಪ್ರಯೋಗಗಳು, ಚಿಂತನೆಗಳು ಮತ್ತು ಹೊಸ ವಿಚಾರಗಳಿಗೆ ಸ್ಪೂರ್ತಿ ನೀಡಿತ್ತಿರುವುದಂತೂ ನಿಜ.  ಆಗ ತಾನೆ ಮೊಳಕೆಯಲ್ಲಿದ್ದ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಒಪ್ಪುವ-ತಿರಸ್ಕರಿಸುವ ಚಿಂತನೆಗಳಿಗೆ ರಾಮನ್ ಪರಿಣಾಮದ ಪ್ರಯೋಗ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಪುರಸ್ಕರಿಸಿ, ಮೊದಲ ಪುರಾವೆ ಕೊಟ್ಟಿತು. ತದನಂತರ ಕ್ಯಾಂಟಮ್ ಮೆಕಾನಿಕ್ಸ್ ಬೆಳೆದ ರೀತಿಯೇ ಅದ್ಬುತ!

ಯುದ್ದ

ಅವನು ಗಡಿಗೆ ಹೊರಟನು;
ಇವಳು ಗುಡಿಗೆ ಹೋದಳು.
ಅವನು ದೇಶಕ್ಕಾಗಿ ಪ್ರಾಣ ನೀಡಲು ಹೊರಟನು;
ಇವಳು ದೇಶಕ್ಕಾಗಿ ಶಾಂತಿ ಜಪಿಸಲು ಹೋದಳು.
ಅವನು ರಾತ್ರಿ ಹಗಲೆನ್ನದೆ ಗಡಿ ಕಾಯಲು ಪಣತೊಟ್ಟನು;
ಇವಳು ಗುಡಿಯಿಂದ ಮನೆಗೆ ಬಂದಳು.

ಅವನಿದ್ದ ಗಡಿಯಿಂದ ಬಂತು,
ವೀರ ಮರಣದ ಸುದ್ದಿ; ಸುದ್ದಿ ಕೇಳಲಾಗದೆ
ಇವಳು ಮತ್ತೊಮ್ಮೆ ಗುಡಿಗೆ ಹೋದಳು.
ಗುಡಿಯ ದೇವರ ಕಣ್ಣಲ್ಲಿ ನೀರು ಜಿನುಗಿತ್ತು;
ಕೇಳಿದಳು, ಏಕೆ ನನ್ನ ಶಾಂತಿಯ ಜಪ ಮನ್ನಿಸಿದೆ?

ಅದಕ್ಕೆ, ದೇವರು ಗದ್ಗದಿಸಿದನು;
ಗಡಿಯ ಸೃಷ್ಟಿ ನಾನಲ್ಲ,
ನೋಡಲಾರೆ ನನ್ನ ಮಕ್ಕಳ “ಸಾವನ್ನು”, ಹೀಗೆ.
ಈಗ ನಾನು ನಿನ್ನಷ್ಟೇ ದುಃಖಿತನು;
ಹುಡುಕುತ್ತಿರುವೆ, ಇದೇಕ್ಕೆಲ್ಲ ಕಾರಣರಾರೆಂದು?

ಲೋಕ ಸೃಷ್ಟಿ ಕರ್ತನ ಆ ಮಾತು ಕೇಳಿ ನಕ್ಕಳು.
ದೇವರಿಗೆ ದುಃಖ ಇನ್ನಷ್ಟು ಉಮ್ಮಳಿಸಿ ಬಂತು;
ಅಷ್ಟರಲ್ಲಿ-
ವೀರ ಮರಣವ ಸಾವೆಂದವನನ್ನು ಕೊಲ್ಲಲು;
ಬರುತ್ತಿರುವ ಭಕ್ತರನ್ನು ಕಂಡಳು; ದೇವರನ್ನು ಉಳಿಸಲು;
ಇವಳೇ ಗಡಿಯ (ಗುಡಿಯ) ಕಾದಳು,
ಮತ್ತೊಮ್ಮೆ, ಶಾಂತಿ ಮಂತ್ರವ ಜಪಿಸಿದಳು…

ಅವಳ ಮನೆಯಲ್ಲಿ, ಗಡಿಯಿಂದ ಬಂದಿದ್ದ,
ಬಾವುಟ ಸುತ್ತಿದ ಅವನ ಕಳೆಬರಹ
ಇವಳಿಗಾಗಿ ಕಾದಿತ್ತು.

ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಡಿಸೆಂಬರ್ 17, 1903ರಲ್ಲಿ ಅರ್ವಿಲ್ಲೇ ರೈಟ್ ಮತ್ತು ವಿಲ್ಬರ್ ರೈಟ್ (ರೈಟ್ ಬ್ರದರ್ಸ್) ಇಬ್ಬರೂ ತಾವೇ ರೂಪಿಸಿದ ವಿಮಾನವನ್ನು ಕ್ಯಾಲಿಫೋರ್ನಿಯಾದ ಕಿಟ್ಟಿ ಹಾಕ್ ಪ್ರದೇಶದಲ್ಲಿ ಮೊದಲ ಬಾರಿಗೆ ಹಾರಿಸಿದರು. ಈ ವಿಮಾನವು 12 ಸೆಕೆಂಡುಗಳ ವರೆಗೆ, ಭೂ ಪ್ರದೇಶದಿಂದ 20 ಅಡಿಗಳ ಅಂತರದಲ್ಲಿ ಹಾರಾಟ ನಡೆಸಿತು. ಇದು ಮಾನವನ ಇತಿಹಾಸದಲ್ಲೇ ಒಂದು ಚಾರಿತ್ರಿಕ ಮೈಲುಗಲ್ಲು.  ರೈಟ್ ಬ್ರದರ್ಸ್ ನ ವಿಮಾನ ಹಾರಾಟವಾಗಿ ಒಂದು ದಶಕದ ಅಂತರದಲ್ಲಿಯೇ (1914 ರಲ್ಲಿ) ಪ್ರಪಂಚದ ಮೊದಲ ಪ್ರಯಾಣಿಕ ವಿಮಾನ ಹಾರಿತು.  ನಂತರ ವೈಮಾನಿಕ ಕ್ಷೇತ್ರದಲ್ಲಿ ನಡೆದಿರುವುದೆಲ್ಲವೂ ರೊಚಕ ಇತಿಹಾಸ, ಅದರಲ್ಲೂ 1969, ಜುಲೈ 20 ರಂದು ಚಂದ್ರನ ಮೇಲೆ ನೀಲ್ ಆರ್ಮಸ್ಟ್ರಾಂಗ್ ನುಡಿದ ಮೊದಲ ನುಡಿಯು ಇನ್ನೂ ನಮ್ಮ ಕಿವಿಯಲ್ಲಿ ಗುಂಗುತ್ತಲೇ ಇದೆ. “That’s one small step for man. One giant leap for Mankind”

Wright Borthers Airplane [Credit: Google Photos]

ರೈಟ್ ಬ್ರದರ್ಸ್ ಅಂದು ನಡೆಸಿದ ಮೊದಲ ವಿಮಾನ ಹಾರಟದಂತೆಯೇ ಇಂದು ನಡೆದ (ಏಪ್ರಿಲ್ 19, 2021) ಮತ್ತೊಂದು ಚಾರಿತ್ರಿಕ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.  ಇದು ನಡೆಯುತ್ತಿರುವುದು ಭೂಮಿಯ ಮೇಲೆ ಅಲ್ಲ, ಬದಲಾಗಿ ಭೂಮಿಯಿಂದ ಸುಮಾರು 48 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದ ಮೇಲೆ.

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ V 541 ರಾಕೆಟ್ ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್ ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021 ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಈ ರೋವರ್ ಸುಮಾರು ಒಂದು ಮಂಗಳ-ವರ್ಷಗಳ ಕಾಲ (ಅಂದರೆ 687 ಭೂ ದಿನಗಳು) ಮಂಗಳನ ಮೇಲೆ ತನ್ನಲ್ಲಿರುವ ಏಳು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಗ್ರಹದ ಅನ್ವೇಷಣೆ ನಡೆಸುತ್ತದೆ. 

Mars 2020: ಪರ್ಸಿವರೆನ್ಸ್ ರೊವರ್ ನ ಉದ್ದೇಶವೇನು?

Perseverence Rover [Credit: NASA/JPL]

ಮಂಗಳ ಗ್ರಹದ ಮೇಲೆ ಇಳಿದಿರುವ ರೋವರ್ ಗಳಲ್ಲಿ ಪರ್ಸಿವರೆನ್ಸ್ ರೋವರ್ ಮೊದಲನೇಯ ರೋವರ್ ಅಲ್ಲಾ. ಈಗಾಗಲೇ ಹಲವು ರೋವರ್ ಗಳು ಮಂಗಳ ಗ್ರಹದಲ್ಲಿ ಅನ್ವೇಷಣೆ ಕೈಗೊಂಡಿವೆ.  ಈ ಎಲ್ಲಾ ರೋವರ್ ಗಳಿಂದ ಬಂದ ಮಾಹಿತಿಯ ಪ್ರಕಾರ ಮಂಗಳ ಗ್ರಹದಲ್ಲಿ ಜೀವಿಗಳು ಹಿಂದೆಂದೋ ಇದ್ದಿರಬಹುದಾದ ಸಾಧ್ಯತೆ ಹೆಚ್ಚಿದೆ ಎಂದು. ಆದರೆ ಯಾವ ರೋವರ್ ಗಳು ಮತ್ತು ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹಗಳೂ ಅಲ್ಲಿ ಜೀವಿಗಳಿತ್ತು ಎಂದು ಕಂಡುಹಿಡಿದು ಸಾಬೀತುಪಡಿಸಿಲ್ಲಾ.  ಈಗ ಇಳಿದಿರುವ ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆದೋ ಇದ್ದ ಜೀವಿಗಳು, ಹೇಗಿದ್ದರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡಲು ಹೊರಟಿದೆ. 

ಜೀವಿಗಳೆಂದರೆ, ಮನುಷ್ಯನ ಗಾತ್ರಕ್ಕೆ ಅಥವಾ ಇನ್ಯಾವುದೋ ಪ್ರಾಣಿಯ ಗಾತ್ರಕ್ಕೆ ಹೊಲುವ ಜೀವಿಗಳಲ್ಲಾ.  ಪರ್ಸಿವರೆನ್ಸ್ ಹುಡುಕಲು ಹೊರಟಿರುವುದು ಸೂಕ್ಷ್ಮಜೀವಿಗಳನ್ನು (Micriobial Life).  ಈ ಜೀವಿಗಳನ್ನು ಹುಡುಕಲು ಮಂಗಳನಲ್ಲಿ ಝೆಜಿರೋ ಕುಳಿಯನ್ನು (Jezero Crator) ಆಯ್ಕೆ ಮಾಡಿಕೊಳ್ಳಲಾಗಿದೆ.  ಯಾಕೆ ಈ ಝೇಜಿರೋ ಕುಳಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರೆ, ಈ ಹಿಂದಿನ ಮಂಗಳನ ಭೂ ಪ್ರದೇಶಗಳ ಅನ್ವೇಷಣೆಯ ಪ್ರಕಾರ ಝೆಜಿರೋ ಕುಳಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಸಾಧ್ಯತೆ ಹೆಚ್ಚಿದ್ದು, ಈ ನೀರಿನಲ್ಲಿ ಸೂಕ್ಷ್ಮಜೀವಿಗಳು ಜೀವಿಸಿರಬಹುದು ಎಂದು ವಿಜ್ಞಾನಿಗಳು ಗ್ರಹಿಸಿದ್ದಾರೆ.

ಪರ್ಸಿವರೆನ್ಸ್ ತನ್ನ ಉಪಕರಣಗಳಲ್ಲಿ ಒಂದಾದ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಟ್ಯೂಬ್ ಆಕಾರದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ಒಂದು ಟ್ಯೂಬ್ ನಲ್ಲಿ ತುಂಬಿ, ಅದಕ್ಕೆ ತನ್ನಲ್ಲಿರುವ ಕೆಲವು ವೈಜ್ಞಾನಿಕ ಉಪಕರಣಗಳ ಸಹಾದಿಂದ ಪರಿಕ್ಷೆ ಮಾಡಿ ಡೇಟಾವನ್ನು ಭೂಮಿಗೆ ರವಾನಿಸುತ್ತದೆ.  ಅಲ್ಲದೆ, ಇಂತಹ ಹಲವು ಮಣ್ಣಿನ ಮಾದರಿಗಳನ್ನು ಝೆಜಿರೋ ಕುಳಿಯ ಸುತ್ತಾ ಮುತ್ತಾ ತೆಗೆದು, ಪರೀಕ್ಷಿಸಿ, ಎಲ್ಲಾ ಟ್ಯೂಬ್ ಗಳನ್ನು ಒಂದು ಕಡೆ ಗುಡ್ಡೆ ಹಾಕುತ್ತದೆ.  ಮುಂದಿನ ಹತ್ತು ವರ್ಷದಲ್ಲಿ ಮಂಗಳ ಗ್ರಹಕ್ಕೆ ತೆರಳುವ ಮತ್ತೊಂದು ರೋವರ್, ಪರ್ಸಿವರೆನ್ಸ್ ಸಂಗ್ರಹಿಸಿ ಗುಡ್ಡೆ ಮಾಡಿದ ಮಣ್ಣಿನ ಟ್ಯೂಬ್ ಗಳನ್ನು ಎತ್ತಿಕೊಂಡು ಭೂಮಿಗೆ ಮರಳುತ್ತದೆ. ನಂತರ ಭೂಮಿಯಲ್ಲಿ ಮಂಗಳನ ಮಣ್ಣಿನ ಪೂರ್ಣ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ.  ಇದಕ್ಕೆ ಸುಮಾರು 10 ವರ್ಷಗಳ ಕಾಲಾವಕಾಶವನ್ನು ಅಂದಾಜಿಸಲಾಗಿದೆ.  

ಚಂದ್ರನ ನಂತರ ಅತೀ ಹೆಚ್ಚು ಬಾಹ್ಯಾಕಾಶ ಎಕ್ಸಪ್ಲೋರೇಷನ್ ಕೈಗೊಂಡ ಸೌರಮಂಡಲದ ಗ್ರಹ ಎಂದರೆ ಅದು ಮಂಗಳ ಗ್ರಹ.  ಮನುಷ್ಯನು ಚಂದ್ರನಲ್ಲಿ ಒಂದು ನಿಲ್ದಾಣ ಮಾಡಿ, ಅಲ್ಲಿಂದ ಮಂಗಳ ಗ್ರಹಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು.  ಈ ಕನಸನ್ನು ನನಸು ಮಾಡುವುದಕ್ಕೆ ಪರ್ಸಿವರೆನ್ಸ್ ಹಲವು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುತ್ತಿದೆ.  ಮಂಗಳ ಗ್ರಹದ ಹವಾಮಾನ, ಭೂ ಪ್ರದೇಶದ ಮಾಹಿತಿ, ಅಲ್ಲಿರುವ ವಾತವರಣದಿಂದ ಆಕ್ಸಿಜನ್ ತಯಾರಿಕೆ ಮತ್ತು ಮಾನವನ ಆಗಮನಕ್ಕೆ ಬೇಕಾದಂತೆ ಹಲವು ಮಾಹಿತಿಯನ್ನು ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಕಲೆಹಾಕಲಿದೆ. 

ಇದರ ಜೊತೆಗೆ ಪರ್ಸಿವರೆನ್ಸ್ ರೊವರ್ ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿದೆ. ಇದನ್ನು ಇಂಜುನಿಟಿ (Ingenuity) ಎಂದು ಕರೆಯಲಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಕ್ಯಾಮರಾ, ಸಂವೇದಕಗಳು (sensors) ಮತ್ತು ಬ್ಯಾಟರಿಯನ್ನು ಹೊರತು ಪಡಿಸಿ ಯಾವ ವೈಜ್ಞಾನಿಕ ಉಪಕರಣವೂ ಇಲ್ಲಾ. ಇದು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ ಮಾದರಿಯಲ್ಲೇ ಇದೆ.  ಆದರೆ ಇದು ಹಾರುವುದು ಮಾತ್ರ ಮಂಗಳ ಗ್ರಹದಲ್ಲಿ! ಇದೆ ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್ ಅನ್ನು ನಾಸಾ ಮಂಗಳ ಗ್ರಹದಲ್ಲಿ ಹಾರಿಸಲಿದ್ದು,  ಈ ಪ್ರಯೋಗ ಒಂದು ತಾಂತ್ರಿಕತೆಯ ಪ್ರದರ್ಶನವಾಗಿದೆ (Technology Demonstration).   

ಮಂಗಳ ಗ್ರಹದಲ್ಲಿ ಇಂತಹಾ ಸಣ್ಣ ಹೆಲಿಕಾಪ್ಟ್ ರ್ ಹಾರಿಸಲು ಕಷ್ಟಾನಾ?

ವಿಮಾನ ಅಥವಾ ಹೆಲಿಕಾಪ್ಟರ್ ಹಾರಿಸಬೇಕಾದರೆ, ಭೂಮಿಯ ವಾತವರಣದ ಸಾಂದ್ರತೆ ಎಷ್ಟಿದೆ ಎಂದು ತಿಳಿದು, ಹೆಲಿಕಾಪ್ಟರ್ ಆಗಿದ್ದರೆ ಅದರ ಬ್ಲೇಡ್ ಗಳನ್ನು ಎಷ್ಟು ವೇಗವಾಗಿ ತಿರುಗಿಸಬೇಕು, ವಿಮಾನವಾಗಿದ್ದರೆ, ಟೆಕ್ ಆಫ್ ಮಾಡಲು ಎಷ್ಟು ವೇಗವಾಗಿ ಚಲಿಸಬೇಕು ಎಂದು ಲೆಕ್ಕಾ ಹಾಕಿ ಹಾರಿಸಲಾಗುತ್ತಿದೆ. ಇದೆ ರೀತಿ ಮಂಗಳ ಗ್ರಹಕ್ಕೂ ಮಾಡಲಾಗುತ್ತದೆ. ಮಂಗಳ ಗ್ರಹದ ವಾತವರಣದ ಸಾಂದ್ರತೆ ಭೂಮಿಯ ಶೇಕಡ ಒಂದರಷ್ಟುರುವುದರಿಂದ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಇಂತಹ ತೆಳುವಾದ ವಾತವರಣದಲ್ಲಿ ಹಾರಿಸುವುದು ಅತ್ಯಂತ ಕಷ್ಟಕರವಾದದ್ದು.

ಮಂಗಳ ಗ್ರಹದ ತೆಳುವಾದ ವಾತರವಣದಲ್ಲಿ ಹೆಲಿಕಾಪ್ಟರ್ ಹಾರಬೇಕಾದರೆ, ಅದರ ಬ್ಲೇಡ್ ಗಳು ಒಂದು ನಿಮಿಷಕ್ಕೆ ಕನಿಷ್ಟ ಅಂದರು 25,000 ಬಾರಿ ತಿರುಗಬೇಕು.  ಭೂಮಿಯಲ್ಲಿ ಈ ಸಂಖ್ಯೆ ಕೇವಲ 500 ರಿಂದ 600! ಇದು ಅತ್ಯಂತ ಸವಾಲಿನ ಕೆಲಸ, ತಾಂತ್ರಿಕವಾಗಿಯೂ ಇಂತಹಾ ಹೆಲಿಕಾಪ್ಟರ್ ಡಿಸೈನ್ ಮಾಡಿ, 48 ಕೋಟಿ ಕಿಲೋಮೀಟರ್ ದೂರದಿಂದ ಕಂಟ್ರೋಲ್ ಮಾಡುವುದು ಇನ್ನೂ ಕಷ್ಟದ ಕೆಲಸ. ಇದೇ ಕಾರಣದಿಂದ ಸತತ ಹತ್ತು ವರ್ಷಗಳ ಪ್ರಯತ್ನದಲ್ಲಿ ನಾಸಾದ ಜೆಟ್ ಪ್ರೋಪುಲ್ಶನ್ ಲ್ಯಾಬೊರೆಟರಿ (Jet Propulsion Laboratory- JPL) ವಿಜ್ಞಾನಿಗಳು, ಇಂಜಿನಿಯರ್ ಗಳು, ಡಿಸೈನರ್ ಗಳು ಎಲ್ಲರೂ ಸೇರಿ ಇಂಜುನಿಟಿ ಎಂಬ ಪುಟ್ಟ ಹೆಲಿಕಾಪ್ಟರ್ ತಯಾರಿಸಿದರು.  ಈ ಹೆಲಿಕಾಪ್ಟರ್ ಅನ್ನು ಪರ್ಸಿವರೆನ್ಸ್ ರೋವರ್ ಮುಖಾಂತರ ಯಾವುದೇ ಅಡೆತಡೆ ಇಲ್ಲದೇ ಮಂಗಳನಲ್ಲಿ ಸುರಕ್ಷಿತವಾಗಿ ತಲುಪಿಸುವುದರಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾದರು.

ಮಂಗಳ ಗ್ರಹದಲ್ಲಿ ಹಾರಿದ ಇಂಜುನಿಟಿ ಹೆಲಿಕಾಪ್ಟರ್

ಪರ್ಸಿವರೆನ್ಸ್ ತನ್ನ ಹೊಟ್ಟೆಯಲ್ಲಿದ್ದ ಇಂಜುನಿಟಿ ಹೆಲಿಕಾಪ್ಟರ್ ಅನ್ನು ಏಪ್ರಿಲ್ 03, 2021 ರಂದು ಮಂಗಳನ ಅಂಗಳನ ಮೇಲೆ ಇಳಿಬಿಟ್ಟಿತು.  ಇದಾದ ನಂತರ ಇಂಜುನಿಟಿಯ ಸವಾಲು ಮಂಗಳನ ಹವಾಮಾನ ಎದುರಿಸುವುದು.  ರಾತ್ರಿಯ ಸಮಯದಲ್ಲಿ -90 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಇಳಿಯುವುದರಿಂದ, ಇಂಜುನಿಟಿಯ ಉಪಕರಣಗಳು ಹಾಳಾಗದಂತೆ ಡಿಸೈನ್ ಮಾಡುವುದು ಸವಾಲಿನ ಕೆಲಸ. ನಾಸಾದ JPL ವಿಜ್ಞಾನಿಗಳು ಇಂಜುನಿಟಿಯನ್ನು ಈ ಎಲ್ಲಾ ಸಾವಲನ್ನು ಮೆಟ್ಟಿ ನಿಲ್ಲುವಂತೆ ಡಿಸೈನ್ ಮಾಡಿದ್ದರು. ತದನಂತರ ಇಂಜುನಿಟಿ ಹೆಲಿಕಾಪ್ಟರ್ ಗೆ ಏಪ್ರಿಲ್ 19 ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ದಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೆಸ್ ನೆಟ್ ವರ್ಕ್ ಅಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೆ ದೂರದಲ್ಲಿದ್ದ ಪರ್ಸಿವರೆನ್ಸ್ ರೊವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಎಲ್ಲಾ ಘಟನೆಗಳೂ ಸ್ವಯಂಚಾಲಿತವಾಗಿ ನಡೆದು, ಘಟನೆಯ ಪ್ರತಿಯೊಂದು ಡೆಟಾಗಳು, ವಿಡಿಯೋಗಳು ರೆಕಾರ್ಡ್ ಆಗಿ ಭೂಮಿಗೆ ಬರಲು ಸುಮಾರು ನಾಲ್ಕು ಗಂಟೆಯ ಸಮಯ ತೆಗೆದುಕೊಂಡಿತು.  ಇಂಜುನಿಟಿಯಿಂದ ಯಾವ ಡೇಟಾ ಬರಬಹುದು, ಪಲಿತಾಂಶ ಏನಿರಬಹುದೂ ಎಂದು ವಿಜ್ಞಾನಿಗಳು ಕಾದು ಕುಳಿತರು.

ಅದೇ ದಿನ ಭಾರತೀಯ ಕಾಲಮಾನದ ಸಮಯ ಸಂಜೆ ನಾಲ್ಕ ಗಂಟೆಯ ಸುಮಾರಿಗೆ ಇಂಜುನಿಟಿಯಿಂದ ಡೇಟಾ ಅದೇ ಡೀಪ್ ಸ್ಪೆಸ್ ನೆಟ್ ವರ್ಕ್ ಅಂಟೆನಾಯಿಂದ ಭೂಮಿಗೆ ಬಂದಿತು.  ಪರ್ಸಿವರೆನ್ಸ್ ರೋವರ್ ಇಂಜುನಿಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗಿದಿದ್ದ ವಿಡಿಯೋ ಮುಖಾಂತರ ಧೃಡೀಕರಿಸಿತು. JPL ಕೊಠಡಿಯಲ್ಲಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ವಿಜ್ಞಾನಿಗಳಿಗೆ ಒಮ್ಮೆಲೆ ಉತ್ಸಹಾ, ಸಂತೋಷದ ಕಟ್ಟೆ ಒಡೆಯಿತು.  ಮಾನವನ ಇತಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೆ ಮೊದಲನೆಯದು. 

Ingeunity Helicopter on Mars [Credit: NASA/JPL]

ಸಧ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ವರ್ಷದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದಂತು ಸತ್ಯ.  ಮುಂದಿನ ಒಂದು ತಿಂಗಳಿನಲ್ಲಿ ಇಂಜುನಿಟಿ ಇಂತಹಾ ಐದು ವೈಮಾನಿಕ ಹಾರಾಟಾ ನಡೆಸಲು ಅನುವಾಗುವಂತೆ ಸಿದ್ದಪಡಿಸಲಾಗಿದೆ.  ಇದು ಮಂಗಳ ಗ್ರಹದ ತೆಳುವಾದ ವಾತವರಣದ ಬಗ್ಗೆ ಮತ್ತಷ್ಟು ಹೆಚ್ಚು ಮಾಹಿತಿಯನ್ನು ನಮಗೆ ನೀಡಲಿದೆ.  ಇಂಜುನಿಟಿ (Ingeunity) ಎಂದರೆ ಕೆಲಸಗಳನ್ನು ಕೌಶಲ್ಯದಿಂದ ಹೊಸರೀತಿಯಲ್ಲಿ ಮಾಡುವುದು. ಹಾಗೆಯೇ ಮಂಗಳನಲ್ಲಿರುವ ಇಂಜುನಿಟಿ, ನಮ್ಮಲ್ಲಿ ಹೊಸ ಯೋಚನೆಗಳನ್ನು, ಹೊಸ ಪ್ರಶ್ನೆಗಳನ್ನು, ಹೊಸ ವಿಚಾರಗಳನ್ನು ಕಲಿಯಲು ಪ್ರೇರೇಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನು ಮಂಗಳ ಗ್ರಹಕ್ಕೆ ತೆರಳುವ ಕನಸುಗಳನ್ನು ನನಸು ಮಾಡಲು ಮೊದಲ ಅಂಬೆಗಾಲಿಟ್ಟಿರುವುದಂತೂ ನಿಜ.

Constants in The Universe [Gch]

Richard Feynman said in one of his lectures that “The stuff which we are made was once cooked in star and spit out”.  This is true, humans, animals, birds, reptiles, rivers, oceans, mountains, buildings, bridges, earth, planets everything was made by the byproduct of stars.  The constituent elements of all these matters were created during the catastrophic explosion of stars, known as ‘supernovae’.  In other words, all living and non living things are star dust!  And also, as we see only matters around us and all around the universe, we can say universe is made up of matters.  On a fundamental scale matter is again made up of atoms and atoms are made up of elementary particles {ex. electrons and quarks (extensive study on elementary particles was done in 20th century)}.  Finally we can say elementary particles are the building blocks of the universe.  But the question is how does this universe behaves or works?  Over a period of 500 years the task of scientist or philosophers was to find the answer for these kinds of questions.  Some of them were succeeded in decoding nature’s secret and able to explain why nature behaves the way it is now or looks the way it is now? (Note: In this article Nature=Universe)

Let me ask you this question, why do you think the nature or everything should be the way it is now? Why can’t in some other way?  What made nature to restrict only to three dimensional worlds?  These are some of the fascinating questions which are still not understood to the full extent.  Nevertheless we still know some of the secrets of nature.  If a mechanical robot can give sensible answer to your question, if we can fly like birds through aeroplanes, if we can see the working heart without dissecting human body through NMR technology, it’s because we know some secret about nature and how it operates.  The laws of physics tell us how nature operates!  Many great peoples have spent their entire life in figuring out the correct laws of nature.  Today we have television, telephone, mobile, microwave, bread toaster, washing machine, air conditioner, car, train aeroplanes, etc, to make our life easy.  All these things have became our integral part of our life.  We are very fortunate to live in this privileged world.  All credits and applause should go to the people who dedicated their entire life to make our life privilege.

But now we will talk about some numbers.  These numbers show the mysteries of nature.  These numbers explains how nature operates.  These are very special numbers and hide many secrets of nature.  The numbers are as follows.

gch

Mathematically speaking these are just numbers.  [G] is the Gravitational Constant, [c] is the speed of light and [h] is the Planck’s Constant.  These are called fundamental constants in physics which appear in Classical Mechanics, Special Relativity and Quantum Mechanics respectively.

As I said, mathematically these are just numbers but in physical world these numbers tell you the secrets of nature.  By using these numbers we can explain why earth and planets are going around the sun?  Why earth is trying to attract every other particle?  Through quantum mechanics we can able to go deep inside atoms and explain the properties and behavior of elementary particles.  Communication has made us to connect instantly throughout the globe.  Today we have all types of sophisticated medical instrument to diagnose various problems.  All these are possible because of these numbers!  Right from explaining planets going around the sun to NMR technology in hospital and live telecast in television sets at home, we need these numbers.  Nothing would have been reality without these numbers.  And again, we are leading privileged life because we know these numbers to some accurate level.

I said these numbers are secrets of nature because nature operates through these numbers.  We don’t know (we certainly do not know in future) why these numbers are (constants) as the way it is now.  But we can certainly say, nature looks the way it is now because of these numbers.  To some extent these constants are called universal constants.  If there are any changes in these numbers, nature never looks the way it is now!!  All our physics theories stands on these numbers and all theories are universal.  It means, if you change G , c and h values to some other numbers and if these numbers are applied to physics theories, the theories still give you result and it would suggest you a different kind of nature.  Do we have a different kind of nature with different values of G , c and h? Answer is, we don’t know! We have not yet found!

In basic physics Length, Mass and Time are called fundamental constants.  We can derive our basic fundamental constants (length, mass and time) in terms of G, c and h by using ‘Dimensional Analysis’ (mathematical process to equate two different quantities through dimensions).  Once it is done the values for length, mass and time are as follows.

Plank units

Here Length Mass and Time are called Planck length, Planck mass and Planck time respectively.  This derivation was first done by Max Planck, so the name.

The length in a centimeter scale starts from zero; we measure all our length with respect to zero.  And also we measure our time from zero seconds (i.e 0 1 2 3 4 5… seconds).  The way we measure all these quantities in our day to day life is by assuming length and time are continuous from zero.  This may workout exceptionally better for all our calculations, but in reality this is not true.  I mean, the length and time are not continuous from zero.  Planck length and Planck time are the lowest limit for the length and time.  We don’t know how length and time looks beyond this limit.  Theoretically, this is our nature’s limit.  Length cannot be defined beyond Planck length and also we cannot distinguish between two events which are happening less that of Planck time.  Right now our modern instruments are sensible to measure length at the order of 10^-18m and time 10^-23 seconds.  We have not yet reached Planck length and Planck time; it is still at the theoretical level.  But even in future no matter how sensitive our instruments, we cannot go beyond Plancks length and Plancks time.  This is the nature’s law!  And we don’t know and we never know how our nature (universe) looks beyond this limit.  And here the Planck mass has the order of 10^27kg.  It is the maximum mass that a point particle (like electron) can have in our universe.  That is, this is the upper limit for a point particle in our universe.  Electrons and quarks which are nature’s stable point particles are many orders less than that of Planck mass.  And again the Planck length, mass and time has those numbers because of G, c and h.  So, it is G, c and h numbers which makes nature operates in the way we see it now!

I must repeat this statement again, we don’t have any knowledge of why these quantities (G, c and h) have these numbers, but on a loose note we can easily say it’s because of these numbers our nature or universe looks the way it is now!!!  If there is any change in these quantities (G, c and h) nature never looks the way it is now.
[G, c, h]= Our Universe!

(All these fundamental quantities (G, c and h) are dimensional quantities.  The actual numbers may change if the units are changed.  In this article the units followed was SI units.  Whatever be the units the meaning of those numbers will be the same.  But in physics and mathematics there are some quantities which are dimensionless.  These quantities are independent of units that we use.  These are called dimensionless fundamental quantities.  Fine structure constant (α) and golden ratio (ϕ) are some examples.  Nature hides its beautiful features in these numbers.  And also the stories behind the discovery of Gravitational Constant (G), Speed of light (c) and Plank constant (h) are very fascinating and inspiring!

ಪ್ರೀತಿ

ನಾನು
ಯಾವ ಧರ್ಮಕ್ಕೂ ಸೇರಿದವನಲ್ಲಾ;
ಎಲ್ಲಾ ಧರ್ಮಕ್ಕೂ ಸೇರಿದವನು

ನಾನು
ಯಾವ ಧರ್ಮದ ಪರವೂ ಇಲ್ಲಾ
ಎಲ್ಲಾ ಧರ್ಮದ ಜೀವದ ಪರ

ನಾನು
ಒಂದು ಧರ್ಮವೇ;
ಒಂದು ಗ್ರಂಥವೇ;
ಒಂದು ಭಾಷೆಯೇ;
ಒಬ್ಬ ದೊರೆಯೇ;
ಶ್ರೇಷ್ಠವೆಂಬ ಸಟೆಯನ್ನು
ಒಪ್ಪುವುದಿಲ್ಲಾ

ನಾನು
ಬ್ರಾಹ್ಮಣ್ಯವೇ ಯುಕ್ತಿ;
ಕ್ಷತ್ರಿಯವೇ ಶಕ್ತಿ;
ವೈಶ್ಯವೇ ವ್ಯವಹಾರ;
ಶೂದ್ರವೇ ಸೇವೆ;
-ವೆಂಬ ನನ್ನೊಳಗಿನ ‘ವರ್ಣ’ರಂಜಿತ
‘ಮನು’ವನ್ನು ಕೊಂದಿದ್ದೇನೆ

ನಾನು
ರಾಮನನ್ನು ನಂಬುವುದಿಲ್ಲಾ;
ಅಲ್ಲಾಹುನನ್ನು ನಂಬುವುದಿಲ್ಲಾ;
ಏಸುನನ್ನು ನಂಬುವುದಿಲ್ಲಾ;
ನಂಬಿರುವುದು ಶರಣನಾದ
ಜಲಗಾರನನ್ನೇ; ಎಲ್ಲರೂ ಅವನೇ

ನಾನು
ಈ ದೇಶದಲ್ಲಿಲ್ಲಾ:
ಆ ದೇಶದಲ್ಲಿಲ್ಲಾ;
ಇರುವ ನೆಲವೆ ಒಂದು ರಾಷ್ಟ್ರ,
ನುಡಿವ ನುಡಿಯೇ ರಾಷ್ಟ್ರಭಾಷೆ,
ಹಾಡುವ ಹಾಡೇ ರಾಷ್ಟ್ರಗೀತೆ,
ಉಡುವ ಅಂಗಿಯೇ ರಾಷ್ಟ್ರಬಾವುಟ

ನಾನು
ಗುಡಿ, ಚರ್ಚು, ಮಸೀದಿಗಳಲಿಲ್ಲಾ;
ಪಾರ್ಲಿಮೆಂಟಿನಲ್ಲಿಲ್ಲಾ;
ಜ್ಞಾನಿಯಲ್ಲಾ, ಜವಾನನಲ್ಲಾ,
ರೈತನಲ್ಲಾ, ಸೈನಿಕನಲ್ಲಾ;
ಎಲ್ಲರೊಳಗಿರುವ ಬುದ್ಧ

ಇಂದು
ನಾನು
ಬದುಕಿಲ್ಲಾ;
ಬದುಕಿದ್ದರೆ, ಪ್ರೀತಿಯಲ್ಲಿ ಮಾತ್ರ
ಸತ್ತರೆ, ಭೂಮಿಯೇ ರಣರಂಗ

ಇಂತಿ ನಿಮ್ಮ ನಾನು

James Webb Telescope

1609 ವೆನ್ನಿಸ್ ಅಲ್ಲಿ ನಡೆದ ಎಕ್ಸ್ಪೋಸಿಶನ್ ನಲ್ಲಿ ಒಂದು ಆಪ್ಟಿಕಲ್ ಟ್ಯೂಬ್ ಅನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಆಪ್ಟಿಕಲ್ ಟ್ಯೂಬ್ ಅಂದರೆ, ಈಗಿನ ಬೈನಾಕ್ಯುಲರ್ ನ ಒಂದು ಭಾಗ.  ಈಗ ಇಂತಹಾ ಆಪ್ಟಿಕಲ್ ಟ್ಯೂಬ್ ಅನ್ನು ಮೋನಾಕ್ಯುಲರ್ ಎಂದು ಕರೆಯುತ್ತಾರೆ. ಆಪ್ಟಿಕಲ್ ಟ್ಯೂಬ್ ನ ಪ್ರದರ್ಶನದ ವಿಷಯ ಅಂದಿನ ಒಬ್ಬ ಗಣಿತಜ್ಞನ ಗಮನಕ್ಕೆ ಬಂದಾಗ, ಅದನ್ನು ನೋಡಲು ವೆನ್ನಿಸ್ ಎಕ್ಸ್ಪೋಸಿಶನ್ ಗೆ ಹೊಗಲೇ ಬೇಕು ಎಂದುಕೊಂಡರು.   ಎಕ್ಸ್ಪೋಸಿಶನ್ ನಲ್ಲಿದ್ದ ಆಪ್ಟಿಕಲ್ ಟ್ಯೂಬ್ ಅನ್ನು ವಿನ್ಯಾಸ ಮಾಡಿದ್ದು ಕನ್ನಡಕ ತಯಾರಕ. ಅವನ ಹೆಸರು ಹ್ಯಾನ್ಸ್ ಲಿಪರ್ಶೆ. ಇತನೇ ಈ ಆಪ್ಟಿಕಲ್ ಟ್ಯೂಬ್ ನ ಸಂಶೋಧಕ ಎಂದೂ ಕರೆಯಲಾಗಿದೆ. ಆ ಎಕ್ಸ್ಪೋಸಿಶನ್ ನಲ್ಲಿ ದೂರದಲ್ಲಿ ಕಾಣುವ ವಸ್ತುವನ್ನು ಎರಡು ಲೆನ್ಸ್ ಗಳಿರುವ ಆಪ್ಟಿಕಲ್ ಟ್ಯೂಬ್ ನ ಸಹಾಯದಿಂದ ಹತ್ತಿರದಲ್ಲಿರುವಂತೆ ನೋಡಬಹುದು ಎಂದು ವಾದಿಸುತ್ತಿದ್ದ ಮತ್ತು ಎಲ್ಲರಿಗೂ ತೊರಿಸುತ್ತಿದ್ದ.  ಇದನ್ನು ನೋಡಲು ಹೊದ ಗಣಿತಜ್ಞನ ಹೆಸರು ಗೆಲಿಲಿಯೋ ಗೆಲಿಲಿ!

ಮೊದಲ ಬಾರಿಗೆ ಗೆಲಿಲಿಯೋ ಈ ಆಪ್ಟಿಕಲ್ ಟ್ಯೂಬ್ ಅನ್ನು ಕಂಡಾಗ ಇದನ್ನು ಇನ್ನಷ್ಟು ಸುಧಾರಿಸಿ ವಿನ್ಯಾಸ ಮಾಡಿದರೆ ವಸ್ತುಗಳು ಸ್ಪಷ್ಟವಾಗಿ ಕಾಣಬಹುದು ಎಂದು ತಿಳಿದು, ತನ್ನ ಯೋಚನೆಯ ಅನುಸಾರ ಹೊಸದಾಗಿ ಈ ಆಪ್ಟಿಕಲ್ ಟ್ಯೂಬ್ ಅನ್ನು ವಿನ್ಯಾಸ ಮಾಡಿದನು. ತದನಂತರ ಇದು ಸ್ಪೈ ಗ್ಲಾಸ್ (Spy Glass- ಪತ್ತೇದಾರಿ ಕನ್ನಡಕ) ಎಂದೇ ಪರಿಚಯವಾಯಿತು. ಇದನ್ನು ಸಮುದ್ರದಲ್ಲಿ ದೂರದಲ್ಲಿ ಬರುವ ಮತ್ತು ಹೊಗುವ ಹಡಗುಗಳನ್ನು ನೋಡಲು ಉಪಯೋಗಿಸಲಾಗುತ್ತಿತ್ತು. ಗೆಲಿಲಿಯೋ ಕೂಡ ಈ ಸ್ಪೈ ಗ್ಲಾಸ್ ಅನ್ನು ಅಂದಿನ ವೆನ್ನಿಸ್ ನಗರದ ಮ್ಯಾಜಿಸ್ಟ್ರೇಟರ್ ಗೆ ನೀಡಿದ್ದ. ಈ ಸ್ಪೈ ಗ್ಲಾಸ್ ಜನಪ್ರಿಯವಾದಂತೆ ಗೆಲಿಲಿಯೋನ ಜನಪ್ರಿಯತೆಯೂ ಹೆಚ್ಚಿತು.  ತದನಂತರ, ಗೆಲಿಲಿಯೋ ಈ ಸ್ಪೈ ಗ್ಲಾಸ್ ಮೇಲೆ ಅನೇಕ ವಿಧದ ಪ್ರಯೋಗಗಳನ್ನು ನಡೆಸಿ, ಇತರೆ ಕೆಲಸಗಳಿಗೂ ಉಪಯೋಗವಾಗಬಹುದಾ ಎಂಬುದನ್ನು ಯೋಚಿಸುತ್ತಿದ್ದ. ಹೀಗೆ ಯೋಚಿಸಿ, ಅನೇಕ ಪ್ರಯೋಗಗಳನ್ನು ನೆಡೆಸಿ ತನ್ನ ಸ್ಪೈ ಗ್ಲಾಸ್ ಅನ್ನು ಇನ್ನಷ್ಟು ಸುಧಾರಿಸಿ, ಆಕಾಶದ ಕಡೆಗೆ ತಿರುಗಿಸಿದ!

ಮನುಷ್ಯನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಚಂದ್ರನನ್ನು ಗೆಲಿಲಿಯೋ ತಾನೇ ಮಾಡಿದ ಸ್ಪೈ ಗ್ಲಾಸ್ (ದೂರದರ್ಶಕ)ನಿಂದ ಹತ್ತಿರದಲ್ಲಿ ಕಂಡಿದ್ದ.  ಚಂದ್ರನ ಮೇಲೆ ಕುಳಿ (Crater) ಗಳಿರುವುದನ್ನು, ಬೆಟ್ಟ ಗುಡ್ಡಗಳಿರುವುದನ್ನು ಮೊದಲ ಬಾರಿಗೆ ಕಂಡದ್ದು ಗೆಲಿಲಿಯೋ. ಇದಾದ ನಂತರ ಅಂದಿಗೆ ತಿಳಿದಿದ್ದ ಆಕಾಶದಲ್ಲಿ ಚುಕ್ಕಿಗಳಂತೆ ಹೊಳೆಯುತ್ತಿದ್ದ ಆಕಾಶದ ಅಲೆಮಾರಿಗಳಾದ ಗ್ರಹಗಳ ಕಡೆಗೆ ತನ್ನ ಸ್ಪೈ ಗ್ಲಾಸ್ ಅನ್ನು ತಿರುಗಿಸಿದ. ಇದು ಗೆಲಿಲಿಯೋನಾ ಕಲ್ಪನೆಗೂ ನಿಲಕದ ಕ್ಷಣವಾಗಿತ್ತು!

ಅಲ್ಲಿಯವರೆಗೂ ಆಗಸದಲ್ಲಿ ಚುಕ್ಕಿಯಾಗಿ ಒಂದು ನಕ್ಷತ್ರ ಪುಂಜದಿಂದ ಮತ್ತೊಂದು ನಕ್ಷತ್ರ ಪುಂಜಕ್ಕೆ ಚಲಿಸುತ್ತಿದ್ದ ಗ್ರಹಗಳನ್ನು ಮೊದಲ ಬಾರಿಗೆ ಡಿಸ್ಕ್ ರೂಪದಲ್ಲಿ (ಗ್ರಹಗಳ ಅಸ್ಪಷ್ಟವಾದ ವಿವರಗಳು) ಕಂಡಿದ್ದ ಗೆಲಿಲಿಯೋ. ನಂತರ ನಕ್ಷತ್ರಗಳಿಗೆ ಸ್ಪೈ ಗ್ಲಾಸ್ ಅನ್ನು ತಿರುಗಿಸಿದಾಗ, ಅವುಗಳು ಚುಕ್ಕಿಯಾಗಿಯೇ ಕಂಡವು. ಇದನ್ನು ಗಮನಿಸಿದ ಗೆಲಿಲಿಯೋ ನಕ್ಷತ್ರಗಳು ಗ್ರಹಗಳಿಗಿಂತಲೂ ಅತೀ ಹೆಚ್ಚು ದೂರದಲ್ಲಿವೆ ಎಂಬುದನ್ನು ಗ್ರಹಿಸಿದ.  ಗುರು ಗ್ರಹವನ್ನು ತನ್ನ ಸ್ಪೈ ಗ್ಲಾಸ್ ಅಲ್ಲಿ ಕಂಡಾಗ.  ಅದರ ಸುತ್ತ ನಾಲ್ಕು ಚುಕ್ಕಿಗಳು, ಚಂದ್ರ ಹೇಗೆ ಭೂಮಿಯ ಸುತ್ತ ಸುತ್ತುತ್ತಿದ್ದಾನೆ ಹಾಗೆ ಅವುಗಳು ಗುರು ಗ್ರಹದ ಸುತ್ತ ಸುತ್ತುತ್ತಿವೆ ಎಂಬುದನ್ನು ಗ್ರಹಿಸಿದ.  ಇದು ಅಂದಿನ ಸಾಂಪ್ರದಾಯಿಕವಾದಿಗಳು ಮತ್ತು ಮೂಲಭೂತವಾದಿಗಳಿಗೆ ಹಿಡಿಸಲಿಲ್ಲ. ಅವರು ಭೂಮಿ, ಭೂಮಿ ಸುತ್ತ ಚಂದ್ರ ಸುತ್ತುವುದು; ಹಿಗೆ ಇರುವ ಏಕಮಾತ್ರ ವ್ಯವಸ್ಥೆಯನ್ನು ದೇವರು ಸೃಷ್ಟಿಸಿದ್ದಾನೆ ಎಂಬ ನಂಬಿಕೆಗಳ ವಿರುದ್ಧವಾಗಿದ್ದವು. ಆದರೆ, ಈ ನಂಬಿಕೆಗಳನ್ನೆಲ್ಲವನ್ನು ಹೊಡೆದು ಹಾಕಿದ್ದು, ಗೆಲಿಲಿಯೋನ ಆಕಾಶ ವೀಕ್ಷಣೆ. ಗುರು ಗ್ರಹದ ಉಪಗ್ರಹಗಳನ್ನು ಇಂದಿಗೂ ಗೆಲಿಲಿಯೋ ಮೂನ್ಸ್ (ಗೆಲಿಲಿಯೋ ಉಪಗ್ರಹಗಳು) ಎಂದು ಕರೆಯುತ್ತಾರೆ.  ಗೆಲಿಲಿಯೋ ವಿನ್ಯಾಸ ಮಾಡಿದ ಸ್ಪೈ ಗ್ಲಾಸ್ ಅನ್ನು ಗೆಲಿಲಿಯೋ ದೂರದರ್ಶಕ ಎಂದು ಕರೆಯಲಾಗಿದೆ.  ಈ ದೂರದರ್ಶಕ ಮನುಷ್ಯನು ನಿರ್ಮಿಸಿಕೊಂಡಿರುವ ಒಂದು ಅಪರೂಪದ ಕಣ್ಣು. ಇದು ಸಾಂಪ್ರದಾಯಿಕತೆ ಮತ್ತು ಮೂಲಭೂತವಾದಿಗಳ ಜೊಳ್ಳುಗಟ್ಟಿದ ಚಿಂತನೆಗಳನ್ನು ಒಡೆದು ಹಾಕಿ ವಿಶ್ವದ (ಪ್ರಕೃತಿಯ) ವಾಸ್ತವತೆ, ವಿಶಾಲತೆ ಮತ್ತು ನಿಗೂಢತೆಯನ್ನು ನಮ್ಮ ಕಣ್ಣೆದುರಿಗಿರಿಸಿತು. 1609 ರ ಹಿಂದಿನ ಮನುಷ್ಯನಿಗಿದ್ದ ಖಗೋಳದ ಅರಿವು, ದೂರದರ್ಶಕ ಬಂದ ನಂತರದ ಮನುಷ್ಯನಿಗಿರುವ ಖಗೋಳದ ತಿಳಿವು ಹೊಲಿಸಲಾಸಾಧ್ಯ.  ನಭೋ ಮಂಡಲದ ವಿಸ್ಮಯವನ್ನು ಭೇಧಿಸುವಲ್ಲಿ, ವಿಶ್ವದ ಉಗಮ, ಪ್ರಸ್ತುತತೆ, ಅಂತ್ಯ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಾರಿಯಲ್ಲಿ ದೂರದರ್ಶಕವು ಒಂದು ಕ್ರಾಂತಿಕಾರಿಕ ಬದಲಾವಣೆಯನ್ನೇ ಮಾಡಿದೆ.  ದೂರದರ್ಶಕವನ್ನು ಮೊದಲ ಬಾರಿಗೆ ವಿನ್ಯಾಸ ಮಾಡಿ ಆಕಾಶಕ್ಕೆ ತಿರುಗಿಸಿದ್ದು, ಇಂದಿಗೆ ಸುಮಾರು 412 ವರ್ಷಗಳಾಗಿವೆ!

Don’t Know Much About ಸರಣಿಯ ಪುಸ್ತಕಗಳ ಲೇಖಕ ಮತ್ತು ಇತಿಹಾಸಕಾರರಾದ ಕೆನ್ನಿತ್ ಸಿ ಡೆವಿಸ್ ತನ್ನ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ. “Necessity is the mother of invention ಎಂಬ ಇಂಗ್ಲೀಷ್ ನಾಣ್ಣುಡಿಯನ್ನು ಕೇಳಿರಬೇಕು. ಗೆಲಿಲಿಯೋ ಕಾಲದಲ್ಲೂ, ಅಲ್ಲಿಂದೂ ಇಗಲೂ ಹಲವು ಹೊಸ ಅವಿಷ್ಕಾರಗಳು, ತಂತ್ರಜ್ಞಾನಗಳು ತೀವ್ರಗತಿಯಲ್ಲಿ ನಡೆದಿರುವ ಕಾಲಘಟ್ಟಗಳನ್ನು ಅವಲೋಕಿಸಿದರೆ, ಅವೆಲ್ಲವೂ ನಡೆದಿರುವುದು ಯುದ್ಧದ ಸಮಯದಲ್ಲಿಯೇ ಅಥವಾ ಯುದ್ಧಕ್ಕೋಸ್ಕರವೇ.  “May be war is the inventor’s father” ಎಂದು ಬಣ್ಣಿಸುತ್ತಾನೆ”.  ಹಾಗೆಯೇ ಅತೀ ಹೆಚ್ಚು ಸಂಶೋಧನೆಗಳು ನಡೆದಿರುವುದು ಯುದ್ಧದ ಸಮಯದಲ್ಲಿ ಅಥವಾ ಯುದ್ಧ ಮಾಡುವುದಕ್ಕಾಗಿಯೇ.  ಎರಡನೇ ಮಾಹಾ ಯುದ್ಧ ಅಂತ್ಯಗೊಂಡ ನಂತರ, 1960ರ ದಶಕದಲ್ಲಿ ಪ್ರಾರಂಭವಾಗಿದ್ದು ಸ್ಪೇಸ್ ರೇಸ್ (Space Race) ಎಂಬ ಶೀತಲ ಸಮರ.  ಅಮೇರಿಕಾದವರು ಹಿಟ್ಲರ್ ಸಾಮ್ರಾಜ್ಯದಲ್ಲಿ ರಾಕೆಟ್ ಇಂಜಿನಿಯರ್ ಆಗಿದ್ದ ವಾರ್ನರ್ ವಾನ್ ಬ್ರೌನ್ ಅನ್ನು ಸಾಯಿಸದೇ ಹಿಡಿದುಕೊಂಡು ಹೊಗುತ್ತಾರೆ. ಈತ ವಿನ್ಯಾಸ ಮಾಡಿದ V2 ರಾಕೆಟ್ ಎರಡನೇ ಮಾಹಾ ಯುದ್ಧದಲ್ಲಿ ಲಂಡನ್ ಅನ್ನು ಧ್ವಂಸ ಮಾಡಿತ್ತು. ಈ ರಾಕೆಟ್ ಇಂಜಿನಿಯರ್ ಅಮೇರಿಕನ್ ಆದ ನಂತರ, ನಾಸಾ ಸೇರಿದ ಮೇಲೆ, 1969ರಲ್ಲಿ V2 ರಾಕೆಟ್ ಅನುಭವದಿಂದಲೇ ತಯಾರಿಸಿದ Saturn V ರಾಕೆಟ್ ನಲ್ಲಿ ಹೊರಟ ಅಪೋಲೋ 11 ಗಗನಯಾತ್ರಿಗಳು ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟರು. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲು ಇಳಿದದ್ದು, ನಂತರ ಬಸ್ ಆಲ್ಡ್ರಿನ್ ಇಳಿಯುತ್ತಾರೆ. ಮೈಕ್ ಕಾಲಿನ್ಸ್ ಗಗನ ನೌಕೆಯಲ್ಲಿ ಚಂದ್ರನನ್ನು ಸುತ್ತುತ್ತಿರುತ್ತಾರೆ.  ಭೂಮಿಯನ್ನು ಬಿಟ್ಟು ಸೌರ ಮಂಡಲದ ಇನ್ನೊಂದು ಆಕಾಶ ಕಾಯದಲ್ಲಿ ಕಾಲಿಟ್ಟ ಮೊದಲ ಮಾನವನ ಹೆಜ್ಜೆಗಳು ಅಪೋಲೋ 11 ಗಗನ ಯಾತ್ರಿಗಳದ್ದಾಗಿತ್ತು! ಇದು ಸಾಧ್ಯವಾದದ್ದು V2 ರಾಕೆಟ್ ನಿಂದ ಎರವಲಾಗಿ ಪಡೆದಿದ್ದ ತಂತ್ರಜ್ಞಾನದಿಂದ.  ಅಂದಿನ ಸಂವಹನ ಮಾಧ್ಯದಲ್ಲಿ ಲೈವ್ ಆಗಿ ಪ್ರಪಂಚದಾದ್ಯಂತ ಜನರು ನೋಡಿದ, ಕೇಳಿದ ಘಟನೆ ಇದಾಗಿತ್ತು. ಅಪೋಲೋ ಯೋಜನೆಯು ಕೂಡ ಅಮೇರಿಕಾ ಮತ್ತು ರಷ್ಯಾದ ಸ್ಪೇಸ್ ರೇಸ್ ಶೀತಲ ಸಮರದ ಒಂದು ಭಾಗವಾಗಿತ್ತು. ಅದೇನೆ ಇರಲಿ, 1903 ರಲ್ಲಿ ರೈಟ್ ಬ್ರದರ್ಸ್ ಪ್ರಥಮವಾಗಿ ವೈಮಾನಿಕ ಸಂಚಾರವನ್ನು ನಡೆಸುವಲ್ಲಿ ಸಫಲವಾಗುತ್ತಾರೆ. ಇದಾದ 56 ವರ್ಷಗಳಲ್ಲಿ ಚಂದ್ರನ ಮೇಲೆ ಮಾನವ ನಡೆಯು ಚಾರಿತ್ರಿಕ ಸಂಧರ್ಬ 1969ರ ಅಪೋಲೋ ಆಗಿತ್ತು.

ಖಗೋಳ ವಿಜ್ಞಾನದ ಕೂತೂಹಲ ಹೆಚ್ಚಾದಂತೆ, ಅನೇಕ ಉಪಗ್ರಹಗಳು, ಗಗನನೌಕೆಗಳು, ಬಾಹ್ಯಾಕಾಶ ನಿಲ್ದಾಣಗಳು ಭೂಮಿಯ ಕಕ್ಷೆಗೆ ಹಾರತೊಡಗಿದವು. ಖಗೋಳದ ಕೌತುಕಗಳನ್ನು ಕಂಡು ಹಿಡಿಯಲು ಬೇಕಾಗುವ ಥಿಯರಿಗಳು, ಚರ್ಚೆಗಳು ಮತ್ತು ಸಾಧನಗಳು ಸಹ ಅಭಿವೃದ್ಧಿಗೊಂಡವು.  ವಿಶ್ವದ ನಿಗೂಢತೆ, ವಿಶ್ವದ ಉಗಮವನ್ನು ಭೇದಿಸಲೇ ಬೇಕು ಎನ್ನುವ ಮಾನವನ ಚಲವು ಹೆಚ್ಚುತ್ತಾ ಹೊದಂತೆ, ಅದರ ಸವಾಲುಗಳು ಹೆಚ್ಚ ತೊಡಗಿದವು.  ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೋ ವಿನ್ಯಾಸ ಗೊಳಿಸಿದ್ದ ದೂರದರ್ಶಕಕ್ಕಿಂತಲೂ 300, 400 ಪಟ್ಟು ಹೆಚ್ಚು ಸಾಮರ್ಥ್ಯವಿರುವ ದೂರದರ್ಶಕದ ವೀಕ್ಷಣಾಲಯಗಳನ್ನು ಭೂಮಿಯ ಮೇಲೆ ನಿರ್ಮಿಸಿ ಆಕಾಶದ ಒಂದಿಂಚು ಬಿಡದೆ ವೀಕ್ಷಣೆ ಮತ್ತು ಅಧ್ಯಯನವನ್ನು ಮನುಷ್ಯನು ಇಂದಿಗೆ ಕೈಗೊಳ್ಳುತ್ತಿರುವುದು ವಿಶೇಷ.

ಆದರೆ, ಈ ಭೂ ವೀಕ್ಷಣಾಲಯದಲ್ಲಿಯೂ ಒಂದು ಸಮಸ್ಯೆ ಇದೆ.  ಭೂಮಿಯ ವಾತವರಣವೇ ಒಂದು ದೊಡ್ಡ ಸಮಸ್ಯೆ.  ಬಿಲಿಯನ್ ಜೋತಿ ವರ್ಷಗಳ ದೂರದಲ್ಲಿರುವ ಗ್ಯಾಲಾಕ್ಸಿ, ನೆಬುಲ್ಲಾಗಳ ಮಸುಕಾದ ಬೆಳಕು ಭೂಮಿಯ ವಾತವರಣವನ್ನು ಪ್ರವೇಶಿಸಿ ಬರಬೇಕು. ಭೂ ವಾತವರಣದಲ್ಲಿನ ಹಲವು ಅನಿಲಗಳು, ಕಣಗಳು ಈ ಬೆಳಕಿನ ಜೊತೆ ಸಂವಹನಗೊಳ್ಳುತ್ತವೆ. ಈ ಬೆಳಕನ್ನು ಭೂಮಿಯ ವಿಕ್ಷಣಾಲಯಗಳು ಅಧ್ಯಯನ ಮಾಡುವಾಗ ಆಕಾಶ ಕಾಯಗಳ ಹಲವು ಮಾಹಿತಿಗಳು ನಾಶವಾಗುತ್ತದೆ ಅಥವಾ ಅಸ್ಟಷ್ಟವಾಗುತ್ತವೆ. ಹಾಗಾಗಿ ಭೂ ವೀಕ್ಷಣಾಲಯಗಳಿಗೆ ಕೆಲವೊಂದು ಮಿತಿ ಇದೆ.  ಇದನ್ನು ಸರಿ ಪಡಿಸುವುದು ಹೇಗೆ ಎಂದರೆ, ವೀಕ್ಷಣಾಲಯಗಳನ್ನು ಭೂಮಿಯಿಂದ ಹೊರಗೆ ಅಂದರೆ, ಭೂ ವಾತವರಣದಿಂದ ಹೊರಗೆ ನಿರ್ಮಿಸುವುದರಿಂದ ಮಾತ್ರ! 

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ, ವೀಕ್ಷಣಾಲಯಗಳನ್ನು ಉಪಗ್ರಹಗಳ ಮಾದರಿಯಲ್ಲಿ ರಾಕೆಟ್ ಮೂಲಕ ಹಾರಿಸಿ ಭೂ ಕಕ್ಷೆಯಲ್ಲಿ ಸುತ್ತುವಂತೆ ಮಾಡುವುದು ಕಷ್ಟವೇನಾಗಲಿಲ್ಲಾ.  ಈಗೆ ಹಾರಿದ ಅನೇಕ ದೂರದರ್ಶಕಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಹಬಲ್ ದೂರದರ್ಶಕ.  ನಾಸಾ ಸಂಸ್ಥೆಯು ವಿನ್ಯಾಸ ಮಾಡಿದ ಹಬಲ್ ದೂರದರ್ಶಕ 1990 ರಲ್ಲಿ ನಭಕ್ಕೆ ಚಿಮ್ಮಿತು. ಇದು ಭೂಮಿಯಿಂದ ಸುಮಾರು 500 ಕಿಲೋಮೀಟರ್ ದೂರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿದೆ.  ಈ ದೂರದರ್ಶಕದಲ್ಲಿ ಸುಮಾರು 2.4 ಮೀಟರ್ ಅಳತೆಯುಳ್ಳ ದರ್ಪಣ ಇದೆ.  ಭೂಮಿಯಲ್ಲಿ 10 ಮೀಟರ್ ದರ್ಪಣ ಇರುವ ವೀಕ್ಷಣಾಲಯಗಳಿದ್ದರೂ, ಹಬಲ್ ದೂರದರ್ಶಕದ 2.4 ಮೀಟರ್ ದರ್ಪಣ ಅತ್ಯಂತ ಶಕ್ತಿಯುತ.  ಏಕೆಂದರೆ, ಹಬಲ್ ದೂರದರ್ಶಕಕ್ಕೆ ಭೂಮಿಯ ವಾತವರಣದ ಸಮಸ್ಯೆ ಕಾಡುವುದಿಲ್ಲ. ಈ ಕಾರಣದಿಂದ ಹಬಲ್ ನಭೋ ಮಂಡಲವನ್ನು ಅತ್ಯಂತ ನಿಖರವಾಗಿ, ಸೂಕ್ಷ್ಮವಾಗಿ ಗಮನಿಸಿ, ನಮಗೆ ಮಾಹಿತಿಯನ್ನು ನೀಡುವಲ್ಲಿ ಸಫಲವಾಯಿತು. ಈ ದೂರದರ್ಶಕದ ಸಹಾಯದಿಂದ ಸೌರ ಮಂಡಲದ ಗ್ರಹಗಳು, ಗ್ಯಾಲಾಕ್ಸಿಗಳು, ಸೂಪರ್ನೊವಾ ಮತ್ತು ನೆಬುಲ್ಲಾಗಳ ಬಗ್ಗೆ ಮನುಷ್ಯನಿಗೆ ಇದ್ದ ಅರಿವು ಇನ್ನಷ್ಟು ವಿಸ್ತಾರವಾಯಿತು. ಒಂದು ಕಾಲದಲ್ಲಿ ಗ್ರಹದ ಪಟ್ಟಿಯಲ್ಲಿದ್ದ ಪ್ಲೂಟೋ (ಈಗ ಕುಬ್ಜ ಗ್ರಹದ ಪಟ್ಟಿಯಲ್ಲಿದೆ) ಚಿತ್ರವನ್ನು ಪ್ರಥಮ ಬಾರಿಗೆ ನಮಗೆ ಹಬಲ್ ತೊರಿಸಿತು. ಹಬಲ್ ಅನ್ನು ನಭೋ ಮಂಡಲಕ್ಕೆ ಕಳುಹಿಸಿದಾಗ ಅದರ ಆಯಸ್ಸು ಸುಮಾರು 15 ವರ್ಷಗಳು ಎಂದು ಅಂದಾಜಿಸಲಾಗಿತ್ತು.  ಆದರೆ, 30 ವರ್ಷಗಳಾದರೂ ಇಂದಿಗೂ ಚಾಲ್ತಿಯಲ್ಲಿದೆ.  ಈಗೀಗ ಹಬಲ್ ನ ಹಾರ್ಡ್ ವೇರ್ ನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಎಷ್ಟು ತಿಂಗಳು/ವರ್ಷ ಉಪಯೋಗಿಸಬಹುದು ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ.  ಆದರೂ, ಹಬಲ್ ದೂರದರ್ಶಕ ಮನಷ್ಯನ ಕಣ್ಣನ್ನು ಹೆಚ್ಚು ತೀಕ್ಷ್ಣಮಾಡಿ, ವಿಶ್ವದ ಭೂತಕಾಲದ ಇತಿಹಾಸವನ್ನು ನೋಡಲು ಸಹಾಯ ಮಾಡಿತು.

ಈ ವರ್ಷದ ಕ್ರಿಸ್ ಮಸ್ (25ನೇ ಡಿಸೆಂಬರ್) ದಿನದಂದು ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದ, ಗಯಾನ ಸ್ಟೇಸ್ ಸೆಂಟರ್ ನಿಂದ ಏರಿಯನ್ 5 ರಾಕೆಟ್ ನಲ್ಲಿ ಉಡಾವಣೆಗೊಳ್ಳಲಿದೆ ಪ್ರಪಂಚದ ಅತ್ಯಂತ ದೊಡ್ಡದಾದ ಅಂತರಿಕ್ಷ ದೂರದರ್ಶಕ. ಇದರ ಹೆಸರು ಜೆಮ್ಸ್ ವೆಬ್ ದೂರದರ್ಶಕ (James Webb Telescope) ನಾಸಾ ಸಂಸ್ಥೆಯ ದಶಕಗಳ ಕಾಲದ ಮಹಾತ್ವಾಕಾಂಶೆ ಯೋಜನೆ ಇದಾಗಿದೆ. ಇದು, ಅಮೇರಿಕಾ, ಯೂರೋಪ್ ಮತ್ತು ಕೆನಡಾ ದೇಶದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಒಂದು ಅಂತರಾಷ್ಟ್ರೀಯ ಯೋಜನೆ. 

ಹಬಲ್ ದೂರದರ್ಶಕದ ದರ್ಪಣಕ್ಕಿಂತಲೂ ಸುಮಾರು 6 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಜೆಮ್ಸ್ ವೆಬ್ ಟೆಲಿಸ್ಕೋಪ್ ಹೊಂದಿದೆ.  ಈ ದೂರದರ್ಶಕವು ಅಂತರಿಕ್ಷದಲ್ಲಿ ಸಂಪೂರ್ಣವಾಗಿ ತೆರೆದುಕೊಂಡರೆ ಸುಮಾರು ಒಂದು ಟೆನ್ನಿಸ್ ಅಂಗಳದ ಅಳತೆಯಷ್ಟಿರುತ್ತದೆ.  ಭೂಮಿಯಿಂದ ಇದು ಚಲಿಸುವ ದೂರ ಮತ್ತು ತಲುಪುವ ಸ್ಥಳವೂ ವಿಶೇಷವಾದದ್ದು. ಇದನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮಿಟರ್ ದೂರದ ಕಕ್ಷೆಗೆ ಕಳುಹಿಸಲಾಗುತ್ತಿದೆ (ಚಂದ್ರ ಭೂಮಿಯಿಂದ 3 ಲಕ್ಷ ಕಿಲೋಮೀಟರ್ ಇದೆ. ಹಬಲ್ ದೂರದರ್ಶಕ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ).  ಭೌತ ವಿಜ್ಞಾನದ ಪ್ರಕಾರ, ಸೂರ್ಯ, ಭೂಮಿ ಮತ್ತು ಚಂದ್ರನ ಗುರುತ್ವ ಬಲದ ಸಂವಹನದಲ್ಲಿ ಉಂಟಾಗಿರುವ ಲೆಗ್ರಾಂಜಿಯನ್ L2 ‍ಬಿಂದುವಿನಲ್ಲಿ ಈ ದೂರದರ್ಶಕವನ್ನು ಇಡಲಾಗುತ್ತಿದೆ. ಈ ಬಿಂದುವಿನ ವಿಶೇಷವೆಂದರೆ,  ಸೂರ್ಯ, ಭೂಮಿ ಮತ್ತು ಚಂದ್ರನ ಗುರುತ್ವ ಬಲದಿಂದಲೇ ಈ ಬಿಂದುವಿನಲ್ಲಿರುವ ವಸ್ತುವು ಸೂರ್ಯನ ಸುತ್ತ ಸುತ್ತುತ್ತದೆ. ಇದೇ ಕಕ್ಷೆಯಲ್ಲಿ ಯಾವುದೇ ವಸ್ತುವನ್ನು/ ಉಪಗ್ರಹವನ್ನು ಉಳಿಸಿಕೊಳ್ಳಲು ಅತ್ಯಂತ ಕಡಿಮೆ ಇಂದನದ ಅಗತ್ಯತೆ ಇರುತ್ತದೆ. ಅಲ್ಲದೆ, ಯಾವಾಗಲು ಭೂಮಿಯ ನೆರಳಲ್ಲೇ ಇರುವುದರಿಂದ, ಸೂರ್ಯನ ಬೆಳಕು ಈ ದೂರದರ್ಶಕಕ್ಕೆ ಬೀಳುವುದು ಕಡಿಮೆ. ಈ ಎಲ್ಲಾ ಕಾರಣಗಳಿಂದ, ಕಳೆದ ಒಂದು ದಶಕದಿಂದಲೂ 14 ದೇಶದ ವಿಜ್ಞಾನಿಗಳು, ಇಂಜಿನಿಯರ್ಗಳು, ವಿನ್ಯಾಸಕಾರರು ಅತ್ಯಂತ ಸಂಕೀರ್ಣವಾದ ಇಂಜಿನಿಯರಿಂಗ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸಿರುವ ಈ ಜೆಮ್ಸ್ ವೆಬ್ ದೂರದರ್ಶಕದ ಉಡಾವಣೆ 1969ರ ಅಪೋಲೋ 11 ರ ಉಡಾವಣೆಯ ಸಂದರ್ಭದಂತೆ ಎಂದು ಹಲವು ಖಗೋಳ ವಿಜ್ಞಾನಿಗಳು, ವಿಜ್ಞಾನ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಈ ದೂರದರ್ಶಕ ಅವೆಗೆಂಪು (Infrared Radiation) ಕಿರಣಗಳಲ್ಲಿ ಕೆಲಸ ಮಾಡುತ್ತದೆ. ಈ ದೂರದರ್ಶಕದ ಪ್ರಮುಖ ಉದ್ದೇಶ 13.5 ಬಿಲಿಯನ್ ವರ್ಷಗಳ ಹಿಂದೆ ನಡೆದ ಬಿಗ್ ಬ್ಯಾಂಗ್ (ಮಹಾ ಸ್ಟೋಟೋದ)ನ ಯವ್ವನದ ಸ್ಥಿತಿಯನ್ನು ನೋಡುವುದು. ಬಿಗ್ ಬ್ಯಾಂಗ್ ಆದ ನಂತರ ಪ್ರಥಮ ಗ್ಯಾಲಾಕ್ಸಿಗಳು ಹೇಗೆ ಉಗಮವಾದವೂ ಎಂಬ ವಿಷಯವನ್ನು ತಿಳಿಯುವುದು. ಅರೆ ಅಷ್ಟು ವರ್ಷಗಳ ಹಿಂದೆ ನಡೆದ ಘಟನೆಯ ಬಗ್ಗೆ ಈಗ ಹೇಗೆ ತಿಳಿಯುವುದು ಎಂದು ಯೋಚಿಸುತ್ತಿರುವಿರಾ? ನಭೋ ಮಂಡಲದ ವಿಸ್ಮಯವೇ ಹಾಗಿದೆ. ನಾವು ವಿಶ್ವದಲ್ಲಿ ಅತ್ಯಂತ ದೂರದಲ್ಲಿರುವ ಗ್ಯಾಲಾಕ್ಸಿ, ನೆಬುಲ್ಲಾಗಳನ್ನು ನೋಡುತ್ತಿದ್ದರೆ, ನಾವು ಆ ಗ್ಯಾಲಾಕ್ಸಿಗಳು ಎಷ್ಟು ಜೋತಿ ವರ್ಷ ದೂರದಲ್ಲಿವೆಯೋ ಅಷ್ಟು ವರ್ಷದ ಹಿಂದಿನ ಸ್ಥಿತಿಯನ್ನು ಈಗ ನೋಡುತ್ತಿರುತ್ತೇವೆ.  ಉದಾಹರಣೆಗೆ, ಒಂದು ಗ್ಯಾಲಾಕ್ಸಿಯು 10 ಲಕ್ಷ ಜೋತಿ ವರ್ಷ ದೂರದಲ್ಲಿದೆ ಅಂದುಕೊಳ್ಳೋಣ. ಆ ಗ್ಯಾಲಕ್ಸಿಯನ್ನು ದೂರದರ್ಶಕದ ಮುಖಾಂತರ ಈಗ ನೋಡಿದಾಗ ನಮಗೆ ತಿಳಿಯುವ ಮಾಹಿತಿಯು ಆ ಗ್ಯಾಲಕ್ಸಿಯ 10 ಲಕ್ಷ ವರ್ಷದ ಹಿಂದೆ ಹೇಗಿದೆ ಎಂದು. ಇದು ಭೂಮಿಗೂ ಅನ್ವಯವಾಗುತ್ತದೆ.  ಅಂದರೆ, ನಮ್ಮಿಂದ ಮಿಲಿಯನ್ ಜೊತಿ ವರ್ಷ ದೂರವಿರುವ ಗ್ಯಾಲಾಕ್ಸಿಯಿಂದ ಯಾರಾದರೂ ಭೂಮಿಯ ಕಡೆಗೆ ಈಗ ನಮ್ಮನ್ನು ದೂರದರ್ಶಕದಿಂದಲೋ ಅಥವಾ ಇನ್ಯೋವುದೋ ತಂತ್ರಜ್ಞಾನದಿಂದಲೋ ನೋಡುತ್ತಿದ್ದರೆ, ಅವರಿಗೆ ಭೂಮಿಯ ಮೇಲೆ ಮನಷ್ಯರ ಬದಲು, ಭೂಮಿಯ ಡೈನೋಸಾರಾಸ್ ಗಳು ಮಾತ್ರ ಕಾಣುತ್ತಿರುತ್ತವೆ. ಇನ್ನೂ ದೂರದಿಂದ ನೋಡಿದವರಿಗಿ, ಭೂಮಿಯ ಪ್ರಾರಂಭದ ಸ್ಥಿತಿಯುನ್ನು ಮಾತ್ರ ಗ್ರಹಿಸುತ್ತಾರೆ. ಹಾಗಾಗಿ, ನಭೋ ಮಂಡಲದಲ್ಲಿ ಹೆಚ್ಚು ದೂರದಲ್ಲಿರುವ ಆಕಾಶ ಕಾಯವನ್ನು ವೀಕ್ಷಣೆ ಮಾಡಿದಾಗ, ಅಷ್ಠೆ ಹಿಂದಕ್ಕೆ ಅಂದರೆ ಭೂತಕಾಲಕ್ಕೆ ತೆರಳುತ್ತಿರುತ್ತೇವೆ. ಈ ಕಾರಣದಿಂದ ಜೆಮ್ಸ್ ವೆಬ್ ಅಂತರಿಕ್ಷ ದೂರದರ್ಶಕ ಬಿಗ್ ಬ್ಯಾಂಗ್ ನಂತರದ ಮೊದಲ ಗ್ಯಾಲಾಕ್ಸಿಯನ್ನು ಪತ್ತೆ ಹಚ್ಚಬಹುದಾದ ಸಾಮರ್ಥ್ಯವಿದೆ ಎಂದು ಲೆಕ್ಕ ಹಾಕಲಾಗಿದೆ. ಇದಲ್ಲದೆ ಇನ್ನಿತರ ಹಲವು ಖಗೋಳಿಯ ಅನ್ವೇಷಣೆಗಳನ್ನು ಈ ದೂರದರ್ಶಕದಲ್ಲಿನ ಉಪಕರಣಗಳ ಸಹಾಯದಿಂದ ಕೈಗೊಳ್ಳಬಹುದು.  

ಈ ದೂರದರ್ಶಕದಲ್ಲಿ ಇದೂವರೆಗೂ ಯಾವ ದೂರದರ್ಶಕದಲ್ಲಿರದ ಅತ್ಯಾಧುನಿಕ ಉಪಕರಣಗಳಾದ Near-Infrared Camera, Near-Infrared Spectrograph, Mid-Infrared Instruments ಮತ್ತು Near-Infrared Slitless Spectrograph ಗಳನ್ನು ಇತರೆ ವೈಜ್ಞಾನಿಕ ಅಧ್ಯಯನಕ್ಕೆ ಅಳವಡಿಸಲಾಗಿದೆ.   ಇದೊಂತರಾ Future-ready ದೂರದರ್ಶಕ.  ಅಂದರೆ, ಮುಂದೆ ಜನಸಾಮಾನ್ಯರಿಗೆ ದೊರಕಬಹುದಾದ ತಂತ್ರಜ್ಞಾನವೆಲ್ಲವನ್ನು ಈ ದೂರದರ್ಶಕದಲ್ಲಿ ಆಗಲೇ ಜೋಡಿಸಲಾಗಿದೆ. ಇದೆಲ್ಲದರ ಜೊತೆಗೆ, ಭೂಮಿಯಿಂದ 1.5 ಮಿಲಿಯನ್ ಕಿಲೋ ಮಿಟರ್ ದೂರದಲ್ಲಿರುವ ಲೆಂಗ್ರಾಂಜಿಯನ್ L2 ಬಿಂದುವಿನ ಕಡೆಗೆ ಚಲಿಸುವ ಇದರ ಪ್ರಯಾಣ ಅತ್ಯಂತ ಕಠಿಣವಾದದ್ದು.  ರಾಕೆಟ್ ನಲ್ಲಿ ಮಡಿಚಿದ ರೂಪದಲ್ಲಿರುವ ಈ ದೂರದರ್ಶಕ, ನಭೋ ಮಂಡಲದಲ್ಲಿ ಒಂದೊಂದಾಗಿ ಬಿಡಿಸಿಕೊಳ್ಳುತ್ತಾ ಅಷ್ಟು ದೂರ ಕ್ರಮಿಸಬೇಕು.  ಈ ಬಿಡಿಸಿಕೊಳ್ಳುವ ಸಮಯದಲ್ಲಿ ಸಣ್ಣದೊಂದು ಪ್ರಮಾದವಾದರೂ ಈ ದೂರದರ್ಶಕ ಅನುಪಯುಕ್ತವಾಗಬಹುದು.  ಕಳೆದ ಒಂದು ದಶಕದಿಂದ ವಿಜ್ಞಾನಿಗಳು, ಇಂಜಿನಿಯರ್ ಗಳು, ವಿನ್ಯಾಸಕಾರರು ಈ ಸಮಸ್ಯೆಗಳನ್ನೆಲ್ಲ ಗ್ರಹಿಸಿ ಅಷ್ಟೆ ಜಾಗೃತವಾಗಿ, ಹಲಾವಾರು ಪರೀಕ್ಷೆಗೊಳಪಡಿಸಿ, ಪ್ರಯೋಗಗಳನ್ನು ನಡೆಸಿ, ಎಲ್ಲವೂ ಸರಿ ಇದೆ ಎಂದು ಸ್ಪಷ್ಟವಾಗಿ ತಿಳಿದ ಮೇಲೆ ರಾಕೆಟ್ ಒಳಗೆ ಇದನ್ನು ಕೂರಿಸಿದ್ದಾರೆ. ಒಮ್ಮೆ ರಾಕೆಟ್ ಹೊರಟರೆ, ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ಕಂಪ್ಯೂಟರ್ ಪರದೆಯ ಮೂಲಕವೇ ನಿಯಂತ್ರಿಸಬೇಕು!  

ಏನೇ ಇರಲಿ, ಜೆಮ್ಸ್ ವೆಬ್ ದೂರದರ್ಶಕವನ್ನು ಮನುಷ್ಯನ ಚಿನ್ನದ ಕಣ್ಣು (Golden Eye) ಎಂದೇ ಬಿಂಬಿಸಲಾಗುತ್ತಿದೆ.  ದೂರದರ್ಶಕದ ದರ್ಪಣದ ಮೇಲ್ಮೈಯನ್ನು ಚಿನ್ನದಿಂದ ಲೇಪನ ಮಾಡಲಾಗಿದೆ. ಚಿನ್ನವೇ ಏಕೆಂದರೆ, ಚಿನ್ನ ಬೆಳಕನ್ನು (ಅವೆಗೆಂಪು ಕಿರಣಗಳನ್ನು) ಅತಿ ಹೆಚ್ಚು ಪ್ರತಿಫಲಿಸುತ್ತದೆ.  ಈ ಕಾರಣದಿಂದಲೂ ಈ ದೂರದರ್ಶಕ ಚಿನ್ನದ ಕಣ್ಣು ಮತ್ತು ಈ ದೂರದರ್ಶಕ ಮುಂದಿನ ದಿನಗಳಲ್ಲಿ ವಿಶ್ವದ ಬಗ್ಗೆ ನಮಗೆ ನೀಡುವ ಅರಿವು ಚಿನ್ನದಷ್ಠೆ ಮೌಲ್ಯವಾದದ್ದು ಎಂದು ತಿಳಿಯಲಾಗಿದೆ.  ಅಂದಹಾಗೆ ಜೆಮ್ಸ್ ವೆಬ್ ದೂರದರ್ಶಕ ಯಶಸ್ವಿಯಾಗಿ ಉಡಾವಣೆಯಾದ ಮೇಲೆ ಸುಮಾರು ಆರು ತಿಂಗಳು ಬೇಕು ತನ್ನ ವೈಜ್ಞಾನಿಕ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು.  ತದನಂತರ ಈ ದೂರದರ್ಶಕದ ಕಾಲಾವಧಿ ಐದು ವರ್ಷಗಳಿದ್ದು, 10 ವರ್ಷಗಳ ವರೆಗೂ ವಿಸ್ತರಿಸಬಹುದಾಗಿದೆ.  ಜೆಮ್ಸ್ ವೆಬ್ ದೂರದರ್ಶಕದ ಮೊದಲ ಬೆಳಕಿನ ಚುಂಬನ ಹೇಗಿರುತ್ತದೆ ಎಂದು ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಗೆಲಿಲಿಯೋನ ಸ್ಪೈ ಗ್ಲಾಸ್ ಇಂದ ಬಹಳ ದೂರ ಬಂದಿರುವ ಮನುಷ್ಯನಿಗೆ, ಬಿಲಿಯನ್ ವರ್ಷಗಳ ಹಿಂದೆ ವಿಶ್ವವು ಹೆಗಿತ್ತು ಎನ್ನುವ ಕೂತೂಹಲ ಮಾತ್ರ ಇನ್ನೂ ಬತ್ತಿಲ್ಲಾ.

ಬಾಹ್ಯಾಕಾಶ ವಿಷಯ ಬಂದಾಗ, ಬಾಹ್ಯಾಕಾಶದ ವಿಸ್ಮಯ, ಕೌತಕಗಳ ಬದಲು ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವುದು ಆಗರ್ಭ ಶ್ರೀಮಂತರ ಹೆಸರುಗಳು ಮತ್ತು ಅವರ ಕಂಪನಿಗಳು. ಕಳೆದ ಎರಡು ದಶಕಗಳಲ್ಲಿ ಬಾಹ್ಯಾಕಾಶಕ್ಕೆ ಸರ್ಕಾರೇತರ ಖಾಸಗಿ ಸಂಸ್ಥೆಗಳು ಪ್ರವೇಶ ಪಡೆದಿರುವುದು ಹೊಸ ವಿಷಯವೆನಲ್ಲಾ. ಹೇಗೆ ಭೂಮಿಯು ಇಡೀ ಜಿವಸಂಕುಲಕ್ಕೆ ಸೇರಿದ್ದೋ ಹಾಗೇಯೇ ಬಾಹ್ಯಾಕಾಶವು ಎಲ್ಲಾ ದೇಶಗಳಿಗೂ, ಎಲ್ಲಾ ನಾಗರಿಕರಿಗೂ ಸೇರಿದ್ದು. ಒಂದು ದೇಶದವರು ಅಥವಾ ಸರ್ಕಾರವು ಬಾಹ್ಯಾಕಾಶ ತನಗೆ ಸಂಬಂಧಿಸಿದ್ದು ಎಂದು ಹಕ್ಕು ಸ್ಥಾಪಿಸುವ ಪ್ರಶ್ನೆ ಇರುವುದಿಲ್ಲ ಮತ್ತು ಮಾಡುವುದಕ್ಕೆ ಅವಕಾಶವು ಇರುವುದಿಲ್ಲ. ಆದರೆ, ಬಾಹ್ಯಾಕಾಶ ಸಂಶೋಧನೆ, ಅಂತರಿಕ್ಷಯಾನ ಕೈಗೊಳ್ಳಲು ದೇಶಗಳಿಗೆ ಆರ್ಥಿಕ ಶಕ್ತಿ ಇರಬೇಕು ಅಥವ ಇತರ ಶಕ್ತಿ ದೇಶಗಳು ಸಹಾಯ ಮಾಡಬೇಕು. ಶಕ್ತಿಯುತ ದೇಶಗಳಲ್ಲಿನ ಖಾಸಗಿ ಸಂಸ್ಥೆಗಳಿಗೂ ಬಾಹ್ಯಾಕಾಶ ಯಾನ ಮತ್ತು ಅದರ ಲಾಭಧಾಯಕ ಕೆಲಸಗಳಿಗೆ ಸರ್ಕಾರಗಳು ಅನುಮತಿ ನೀಡುತ್ತಿವೆ. ಅವರು ತಮ್ಮದೆ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆದರೆ, ಚರ್ಚೆ ಹುಟ್ಟುಹಾಕಿರುವುದು, ಕಳೆದ ಒಂದು ದಶಕದಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಂದ ನಡೆಯುತ್ತಿರುವ ಕ್ಷಿಪ್ರಗತಿಯ ಅತ್ಯಾಧುನಿಕ ತಾಂತ್ರಿಕತೆ, ರಾಕೆಟ್ ಅಥವಾ ಸ್ಪೇಸ್ ವೆಹಿಕಲ್ ಗಳ ಉಗಮ ಮತ್ತು ಅದರ ಮೂಲಕ ಪ್ರಪಂಚಕ್ಕೆ ಅವರು ಪ್ರಸ್ತುತಿ ಪಡಿಸುತ್ತಿರುವ ಪ್ರಯೋಗಗಳು. ಇಂದಿಗೆ ಜಗತ್ತಿನ ಧೈತ್ಯ ಶ್ರೀಮಂತರೆಲ್ಲಾ ಒಂದೊಂದು ಬಾಹ್ಯಾಕಾಶ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅವರೆಲ್ಲೂರು ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅತ್ಯಂತ ಹೆಚ್ಚು ಹಣವನ್ನು ಹೂಡಿಕೆ ಮಾಡಿ, ರಾಕೆಟ್ ಗಳನ್ನು ಸೃಷ್ಠಿಸಿ, ತಮ್ಮ ಮೂಗಿನ ನೇರಕ್ಕೆ ಅಗತ್ಯವಿರುವದನ್ನು ಯೋಚಿಸಿ ಅದೇ ಸರಿಯೆಂದು ತಿಳಿದು, ಹೆಚ್ಚು ಲಾಭ ಗಳಿಸುವ ದೃಷ್ಠಿಯಿಂದ ಶ್ರಿಮಂತರಿಗೆ ಬಾಹ್ಯಾಕಾಶವನ್ನು ಕೈಗೆಟುಕವಂತೆ ಮಾಡಿ, ಮನುಕುಲಕ್ಕೆ ಉಪಕಾರವಾಗುತ್ತಿದೆ ಎಂದು ಬೀಗುತ್ತಿದ್ದಾರೆ ಎನ್ನುವ ಚರ್ಚೆ ಒಂದಿದ್ದರೆ, ಈ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಮುನ್ನೆಲೆಗೆ ಬಂದ ನಂತರ, ಇವರಿಂದ ಅತೀ ಕಡಿಮೆ ವೆಚ್ಚದಲ್ಲಿ ದೇಶಗಳಿಗೆ ಅಗತ್ಯವಿರುವ ಬಾಹ್ಯಾಕಾಶ ಸೇವೆಗಳು ಮತ್ತು ಸೌಲಭ್ಯಗಳು ಎಲ್ಲರಿಗೂ ಸಿಗುವಂತೆ ಆಗಿದೆ ಎಂದು ಹೇಳುವ ಇನ್ನೊಂದು ಚರ್ಚೆಯೂ ಕೇಳಿ ಬರುತ್ತಿದೆ. ನಮ್ಮಲ್ಲಿ ಹಣವಿದೆ, ತಂತ್ರಜ್ಞಾನವಿದೆ, ಅನುಮತಿ ಇದೆ ಎಂದ ಮಾತ್ರಕ್ಕೆ ತಾವು ಏನೇ ಮಾಡಿದರು ಅದು ಸಾಮಾಜಿಕವಾಗಿ ಸರಿಯಾಗಿಯೇ ಇರುತ್ತದೆ ಎನ್ನವು ಹಟ ಈ ಆಗರ್ಭ ಶ್ರಿಮಂತರಿಗಿದೆ. ಮನುಷ್ಯನು ತಾನು ಇರುವ ಗ್ರಹವನ್ನು ಬಿಟ್ಟು, ಇನ್ನೊಂದು ಗ್ರಹದಲ್ಲಿ ವಾಸಿಸಬೇಕು. ಅಲ್ಲಿರುವ ಸಂಪನ್ಮೂಲಗಳನ್ನು ಮನುಷ್ಯನ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂಬ ಅಚಲ ನಿರ್ಧಾರವನ್ನು ಇವರುಗಳಾಗಲೇ ಮಾಡಿದ್ದರೆ. ಒಬ್ಬರು ಚಂದ್ರ ನನ್ನದು ಎಂದರೆ, ಮತ್ತೊಬ್ಬರು ಮಂಗಳ ಗ್ರಹ ನನ್ನದು ಎನ್ನುವಂತಾಗಿದೆ. ಟಿಕೆಟ್ ಕೂಡ ಆಗಲೇ ಸೇಲ್ ಮಾಡಿದ್ದಾರೆ. ಇದಕ್ಕೆಲ್ಲಾ ಈ ಶಕ್ತಿಯುತ ದೇಶಗಳ ಸರ್ಕಾರದ ಬೆಂಬಲಗಳೂ ಇರುವುದು ರಹಸ್ಯ ವಿಷಯವೇನಲ್ಲಾ. ಏನೆ ಇರಲಿ, ಮಾನವನ ಪ್ರಗತಿಯ ದಾರಿಗೆ ಸರಿಯಾದ ಅಧ್ಯಯನಗಳಿಲ್ಲದೆ, ಅಗತ್ಯಗಳಿಲ್ಲದೆ ತಮ್ಮ ಬಳಿ ಏನು ಬೇಕಾದರೂ ಮಾಡಲು ಹಣವಿದೆ ಎಂದು ಮನಸೋಇಚ್ಛೇ ತನ್ನ ಸಂಸ್ಥೆಯ ಲಾಭಕ್ಕಾಗಿ ಸಾಧಿಸಲೇಬೇಕೆಂದು ಮಾಡುವ ಕೆಲಸಗಳು (ಇತ್ತೀಚೆಗೆ ಸ್ಪೆಸ್ ಗೆ ಹೊಗಿ ಬಂದ ಶ್ರೀಮಂತರುನ್ನು ನೆನಪಿಸಿಕೊಳ್ಳಬಹುದು, ಆಕಾಶದಲ್ಲಿ ಸಾಲುಗಳಾಗಿ ಉಪಗ್ರಹಗಳು ಚಲಿಸುವುದನ್ನು ಕಂಡಿರಬಹುದು) ಮತ್ತು ಶ್ರೀಮಂತರು ಏನು ಮಾಡಿದರು ಅದನ್ನು ಕಿಂಚಿತ್ತು ಅವಲೋಕಿಸದೆ ವಿಜ್ರುಂಬಿಸಿ ತೊರಿಸುವ ಮೆದುಳಿಲ್ಲದ ಮಾಧ್ಯಮಗಳು ಬಾಹ್ಯಾಕಾಶದ ವಿಸ್ಮಯವನ್ನು ಅರಿಯುವ ಮಾನವನ ಚಿಂತನೆಗಳನ್ನು, ಕಲ್ಪನೆಗಳನ್ನು ಹೊಸಕಿ ಹಾಕುತ್ತಿರುವುದಂತೂ ಸತ್ಯ ಎನ್ನಿಸುವಂತಾಗಿದೆ. ಮುಂದೊಂದು ದಿನ, ಬಾಹ್ಯಾಕಾಶ ಎಂದರೆ, ಶ್ರೀಮಂತರು, ಅವರ ಕಂಪನಿಗಳು, ಅವರ ರಾಕೆಟ್ ಗಳು ಅವರ ಲಾಭ-ನಷ್ಟ ಮಾತ್ರ ಹೇಳುವ ಕಾಲ ಬಹಳ ದೂರದಲ್ಲಿಲ್ಲಾ. ಹಾಗೆ ಹೇಳಿದಾಗಲೂ ಅದನ್ನೂ ಸಮರ್ಥಿಸಿಕೊಳ್ಳುವ ನಾಗರೀಕತೆಯನ್ನು (ಮಾಧ್ಯಮ) ಆ ಶ್ರೀಮಂತರೇ ಬೆಳೆಸಿರುತ್ತಾರೆ. ಇದರ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸುವುದು ಅತ್ಯವಶ್ಯಕ.